ಹೊಸದಿಗಂತ ವರದಿ ಕಲಬುರಗಿ:
ಆಸ್ತಿ ಕಲಹದ ಹಿನ್ನೆಲೆಯಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ಕಲಬುರಗಿಯ ಕೆ ಕೆ ನಗರದಲ್ಲಿ ನಡೆದಿದೆ.
ವಿಜಯಲಕ್ಷ್ಮಿ (45) ಕೊಲೆಯಾದ ಮಹಿಳೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಕಲಹ ಇತ್ತು. ಹೊಲದ ವಿಚಾರವಾಗಿ ಸಹೋದರರ ಮಧ್ಯೆ ಜಗಳವು ನಿರಂತರವಾಗಿ ನಡೆಯುತ್ತಿತ್ತು.
ಇದೇ ವಿಷಯವಾಗಿ ಮಂಗಳವಾರ ಬೆಳಗ್ಗೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ವಿಜಯಲಕ್ಷ್ಮಿಯ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.