ಇಂದಿನ ಯುವತಿಯರ ಜೀವನಶೈಲಿಯ ಒಂದು ಅವಿಭಾಜ್ಯ ಭಾಗ ಮೇಕಪ್. ಕಾಲೇಜು, ಕೆಲಸ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಾವತ್ತೂ ಮುಖದಲ್ಲಿ ಮೇಕಪ್ ಇಲ್ಲದೆ ಮನೆಯಿಂದ ಹೊರಹೋಗೋದೆ ಇಲ್ಲ ಅಂತಾರೆ. ಆದರೆ ತಜ್ಞ ವೈದ್ಯರು ಎಚ್ಚರಿಕೆ ನೀಡ್ತಾರೆ, ನೀವು ಬಳಕೆ ಮಾಡುವ ಮೇಕಪ್‌ಗಳಲ್ಲಿ ನಕಲಿ ಅಥವಾ ಕಡಿಮೆ ಗುಣಮಟ್ಟದ ಉತ್ಪನ್ನಗಳು ನಿಮ್ಮ ಆರೋಗ್ಯಕ್ಕೆ ಭಾರಿ ಹಾನಿ ಮಾಡಬಹುದು. ವಿಶೇಷವಾಗಿ, ಈ ರೀತಿಯ ಉತ್ಪನ್ನಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳು ಅಡಗಿರಬಹುದು ಎಂದು ಸಂಶೋಧನೆಗಳು ಹೇಳುತ್ತವೆ.
ತಜ್ಞ ವೈದ್ಯರ ಪ್ರಕಾರ ಯಾವತ್ತೂ ನಂಬಿಗಸ್ತ, ಪ್ರಮಾಣೀಕೃತ ಬ್ರಾಂಡ್‌ಗಳಿಂದ ಮಾತ್ರ ಮೇಕಪ್ ಖರೀದಿ ಮಾಡಬೇಕು. ವೈದ್ಯರ ಸಲಹೆಯಿಲ್ಲದೇ ಯಾವುದೇ ಹೊಸ ಉತ್ಪನ್ನವನ್ನು ಬಳಕೆ ಮಾಡಬಾರದು.
ಸೌಂದರ್ಯ ಕಾಪಾಡುವುದು ಅಗತ್ಯವಾದರೂ, ಆರೋಗ್ಯಕ್ಕಿಂತ ಮುಖ್ಯವೇನೂ ಅಲ್ಲ. ಸುರಕ್ಷಿತ ಉತ್ಪನ್ನಗಳನ್ನು ಬಳಸುವುದರಿಂದ ನೀವು ನಿಮ್ಮ ತ್ವಚೆಯ ರಕ್ಷಣೆ ಮತ್ತು ದೈಹಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು. ಯುವತಿಯರೆ, ನಿಮ್ಮ ಮೇಕಪ್ ಆಯ್ಕೆ ಜಾಗರೂಕವಾಗಿ ಮಾಡಿ, ನಿಮ್ಮ ಆರೋಗ್ಯವನ್ನು ಮೊದಲಿಗೆ ಕಾಪಾಡಿ.