ಮಹಿಳೆಯರಿಗೂ ಬಾರ್‌ಗಳಲ್ಲಿ ಕೆಲಸ: ದೀದಿ ಸರಕಾರದಿಂದ ಮಸೂದೆ ಅಂಗೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್;

ಪುರುಷರಂತೆ ಮಹಿಳೆಯರಿಗೂ ಬಾರ್‌ಗಳಲ್ಲಿ ಕೆಲಸ ಮಾಡಲು ಹಾಗೂ ಮದ್ಯ ಸೇವಿಸಲು ಅವಕಾಶ ಕಲ್ಪಿಸು ಮಸೂದೆಯೊಂದನ್ನು ಪಶ್ಚಿಮಬಂಗಾಳ ವಿಧಾನಸಭೆ ಅಂಗೀಕರಿಸಿದೆ.

ರಾಜ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಪಶ್ಚಿಮ ಬಂಗಾಳ ಹಣಕಾಸು ಮಸೂದೆ- 2025 ಅನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಈ ಮಸೂದೆಯು 1909ರ ಬಂಗಾಳ ಅಬಕಾರಿ ಕಾಯ್ದೆಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸುತ್ತದೆ. ಈ ಮೂಲಕ ಲಿಂಗ ಸಮಾನತೆ ಮತ್ತು ಉದ್ಯೋಗ ಅವಕಾಶಗಳನ್ನು ವಿಸ್ತರಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಇದರಲ್ಲಿ ಆನ್-ಕೆಟಗರಿ ಮದ್ಯದ ಅಂಗಡಿಗಳಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳುವುದರ ಮೇಲಿನ ನಿಷೇಧವನ್ನು ತೆಗೆದುಹಾಕುವುದು ಹಾಗೂ ಅಂಗಡಿಗಳ ಆವರಣದಲ್ಲಿ ಮದ್ಯ ಸೇವನೆಯನ್ನು ಅನುಮತಿಸಲಾಗಿದೆ.

ಮಸೂದೆಯ ಪ್ರಕಾರ, ಮಹಿಳೆಯರು ಈಗ ಬಾರ್‌ಗಳಲ್ಲಿ ಉದ್ಯೋಗ ಮಾಡಲು ಅರ್ಹರಾಗಿದ್ದಾರೆ. ಇದು ಈ ಹಿಂದೆ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಕ್ಷೇತ್ರವಾಗಿತ್ತು. ಈ ಬದಲಾವಣೆಯು ಮಹಿಳೆಯರಿಗೆ ಹೊಸ ಆರ್ಥಿಕ ಅವಕಾಶಗಳನ್ನು ತೆರೆಯುವ ಜೊತೆಗೆ ಸಾಂಪ್ರದಾಯಿಕ ಲಿಂಗ ಆಧಾರಿತ ಉದ್ಯೋಗ ಮಿತಿಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ.

ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಈ ಮಸೂದೆಯನ್ನು ಬೆಂಬಲಿಸಿದ ಶಾಸಕರು, ಮಹಿಳೆಯರಿಗೆ ಸಮಾನ ಉದ್ಯೋಗ ಅವಕಾಶಗಳನ್ನು ಒದಗಿಸುವುದು ಸಮಾಜದ ಪ್ರಗತಿಗೆ ಅವಶ್ಯಕ ಎಂದು ವಾದಿಸಿದರು. ಆದರೆ, ಕೆಲವು ಶಾಸಕರು ಸುರಕ್ಷತೆ ಮತ್ತು ಕೆಲಸದ ವಾತಾವರಣದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!