Friday, January 9, 2026

Women Fashion | ಸೀರೆ ಜತೆಗೆ ಜಾಕೆಟ್ ಮ್ಯಾಚ್ ಆಗುತ್ತಾ? ಚಳಿಗಾಲದಲ್ಲಿ ಇವೆರಡರ ಜೋಡಿ ಹೇಗಿರುತ್ತೆ?

ಚಳಿಗಾಲ ಬಂದಾಗ ಸೀರೆ ಧರಿಸುವ ಆಸೆ ಇದ್ದರೂ, ತಣ್ಣನೆಯ ಗಾಳಿ ಸೊಂಟ, ಬೆನ್ನಿಗೆ ಬಿಸಿ ಸೀರೆ ಉಡುವ ಆಸೆ ನಿರಾಸೆಯಾಗಿಬಿಡುತ್ತೆ. ಆದರೆ ಈಗ ಫ್ಯಾಷನ್ ಲೋಕದಲ್ಲಿ ಸೀರೆ ಜೊತೆ ಜಾಕೆಟ್‌ ಧರಿಸುವ ಟ್ರೆಂಡ್ ಗಮನ ಸೆಳೆಯುತ್ತಿದೆ. ಇದು ಕೇವಲ ಚಳಿ ತಪ್ಪಿಸುವ ಆಯ್ಕೆಯಲ್ಲ, ಸ್ಟೈಲ್‌ ಸ್ಟೇಟ್‌ಮೆಂಟ್ ಕೂಡ ಹೌದು. ಸರಿಯಾದ ಜಾಕೆಟ್ ಆಯ್ಕೆ ಮಾಡಿದರೆ, ಸಾಂಪ್ರದಾಯಿಕ ಸೀರೆಗೂ ಆಧುನಿಕ ಲುಕ್‌ ಸಿಗುತ್ತದೆ.

ಸೀರೆ–ಜಾಕೆಟ್ ಜೋಡಿ ಏಕೆ ಟ್ರೆಂಡಿ?:
ಚಳಿಗಾಲದಲ್ಲಿ ಫುಲ್‌ ಸ್ಲೀವ್ ಜಾಕೆಟ್‌ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಬ್ಲೌಸ್‌ಗೆ ಬದಲಿ ಆಯ್ಕೆಯಾಗಿ ವಿಭಿನ್ನ ಲುಕ್ ನೀಡುತ್ತದೆ.

ಯಾವ ಜಾಕೆಟ್ ಸೂಕ್ತ?:
ಖಾದಿ, ವೂಲನ್, ವೆಲ್ವೆಟ್ ಅಥವಾ ಡೆನಿಂ ಜಾಕೆಟ್‌ಗಳು ಸೀರೆಯೊಂದಿಗೆ ಚೆನ್ನಾಗಿ ಹೊಂದಿಕೆಯಾಗುತ್ತವೆ. ಸಿಲ್ಕ್ ಸೀರೆಗೆ ವೆಲ್ವೆಟ್ ಜಾಕೆಟ್ ಕ್ಲಾಸಿ ಲುಕ್ ನೀಡುತ್ತದೆ.

ಬಣ್ಣದ ಮ್ಯಾಚಿಂಗ್ ಮುಖ್ಯ:
ಸೀರೆ ಪ್ಲೇನ್ ಆಗಿದ್ದರೆ ಜಾಕೆಟ್‌ಗೆ ಡಿಸೈನ್ ಇದ್ದಾರೆ ಒಳ್ಳೆಯದು. ಹೆವಿ ಸೀರೆಗೆ ಸಿಂಪಲ್ ಜಾಕೆಟ್‌ ಆಯ್ಕೆ ಉತ್ತಮ.

ಇದನ್ನೂ ಓದಿ: ಇವುಗಳ ಅಗತ್ಯ ನಮಗಿಲ್ಲ: 66 ಅಂತಾರಾಷ್ಟ್ರೀಯ ಒಕ್ಕೂಟದಿಂದ ಹೊರ ನಡೆದ ಅಮೆರಿಕ!

ಎಲ್ಲಿ ಧರಿಸಬಹುದು?:
ಆಫೀಸ್, ಮದುವೆ ಕಾರ್ಯಕ್ರಮ, ವಿಂಟರ್ ಫೆಸ್ಟಿವಲ್ ಎಲ್ಲೆಲ್ಲೂ ಈ ಜೋಡಿ ಸೂಕ್ತ.

ಸರಿಯಾದ ಸ್ಟೈಲಿಂಗ್ ಮಾಡಿದರೆ, ಸೀರೆ ಜೊತೆ ಜಾಕೆಟ್ ಚಳಿಗಾಲದ ಫ್ಯಾಷನ್‌ನಲ್ಲಿ ನಿಮ್ಮನ್ನು ವಿಭಿನ್ನವಾಗಿ ತೋರಿಸುತ್ತದೆ.

error: Content is protected !!