ಮಹಿಳೆಯರ ಸುರಕ್ಷತೆ ಎಂದರೆ ಕೇವಲ ಸಾಮಾಜಿಕ ಜವಾಬ್ದಾರಿ ಅಲ್ಲ, ಅದು ತಮ್ಮದೇ ಆದ ದಿನನಿತ್ಯದ ಮೊದಲ ಆದ್ಯತೆಯಾಗಬೇಕು. ಮನೆಯಲ್ಲೇ ಇದ್ದರೂ ಅಥವಾ ಬಸ್‌ನಲ್ಲಿ ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದರೂ, ಅಪಾಯಗಳನ್ನೆದುರಿಸಬೇಕಾಗುವ ಸಂಭವ ಹೆಚ್ಚು. ಈ ಹಿನ್ನೆಲೆಯಲ್ಲಿ ಸರ್ಕಾರ ಮಹಿಳೆಯರ ತುರ್ತು ಸಂದರ್ಭಗಳಲ್ಲಿ ತಕ್ಷಣದ ನೆರವನ್ನು ಪಡೆಯಲು ಮೊಬೈಲ್‌ನಲ್ಲಿ ಕೆಲವು ಪ್ರಮುಖ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಗಳನ್ನು ಸೇವ್ ಮಾಡಿಕೊಂಡಿರಬೇಕೆಂದು ಸಲಹೆ ನೀಡಿದೆ.
- 100 – ಪೊಲೀಸ್ ತುರ್ತು ಸಹಾಯ:
ಯಾವುದೇ ಅಪರಾಧ ನಡೆಯುತ್ತಿರುವಾಗ ಅಥವಾ ತುರ್ತು ಸಹಾಯ ಬೇಕಾದಾಗ ಈ ಸಂಖ್ಯೆಗೆ ಕರೆ ಮಾಡಬಹುದು. ಸ್ಥಳೀಯ ಪೊಲೀಸ್ ಠಾಣೆಗೆ ನಿಮ್ಮ ಮಾಹಿತಿ ತಕ್ಷಣ ತಲುಪುತ್ತದೆ. - 1091 – ಮಹಿಳಾ ಸಹಾಯವಾಣಿ:
ಕಿರುಕುಳ, ಹಿಂಸೆ, ನಿಮ್ಮನ್ನು ಹಿಂಬಾಲಿಸಿದಾಗ ಅಥವಾ ಬೆದರಿಕೆ ಸಂದರ್ಭಗಳಲ್ಲಿ ಮಹಿಳೆಯರಿಗೆ ಈ ಸಂಖ್ಯೆ ಅತ್ಯಗತ್ಯ. ತುರ್ತು ಸಂದರ್ಭದಲ್ಲಿ ಕರೆ ಮಾಡಬಹುದಾದ ಈ ಸಂಖ್ಯೆಯ ಸೇವೆ ಉಚಿತವಾಗಿದೆ. - 181 – ರಾಷ್ಟ್ರೀಯ ಮಹಿಳಾ ಸಹಾಯವಾಣಿ:
ಕೌಟುಂಬಿಕ ಹಿಂಸೆ ಹಾಗೂ ಲೈಂಗಿಕ ಕಿರುಕುಳಗಳಿಗೆ ಸ್ಪಂದಿಸುವ ಈ ಸಹಾಯವಾಣಿ, ಸಮಾಲೋಚನೆಯೊಂದಿಗೆ ಸುರಕ್ಷತೆಯನ್ನೂ ಒದಗಿಸುತ್ತದೆ. - 1098 – ಮಕ್ಕಳ ಸಹಾಯವಾಣಿ:
ಮಕ್ಕಳು ಅಥವಾ ಹದಿಹರೆಯದ ಹುಡುಗಿಯರು ಅಪಾಯದಲ್ಲಿ ಇದ್ದರೆ, ಈ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಮಕ್ಕಳ ಮೇಲಿನ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ ಅಥವಾ ಬಾಲ್ಯ ವಿವಾಹದ ಪ್ರಕರಣಗಳಿಗೂ ಇದು ಸೂಕ್ತ. - 108 – ಆಂಬ್ಯುಲೆನ್ಸ್ ಸೇವೆಗಳು:
ತುರ್ತು ವೈದ್ಯಕೀಯ ನೆರವಿಗೆ ಅಥವಾ ಅಪಘಾತ ಸಂದರ್ಭದಲ್ಲಿಯೂ ಈ ಸಂಖ್ಯೆಗೆ ಕರೆ ಮಾಡಬಹುದು. - 1090 – ಸೈಬರ್ ಕ್ರೈಂ ಸಹಾಯವಾಣಿ:
ಆನ್‌ಲೈನ್ ಕಿರುಕುಳ, ಬ್ಲ್ಯಾಕ್‌ಮೇಲ್, ಅಥವಾ ಡಿಜಿಟಲ್ ನಿಂದನೆಗಳನ್ನು ಎದುರಿಸುತ್ತಿದ್ದರೆ ಈ ಸಂಖ್ಯೆಯಲ್ಲಿ ದೂರು ನೀಡಬಹುದು. - ಸಂಪೂರ್ಣ ರಕ್ಷಣೆಗೆ ‘ಅಪ್ಲಿಕೇಶನ್’ ಸಹಾಯ:
ಸರ್ಕಾರಗಳು ಹಲವು ಮಹಿಳಾ ಸುರಕ್ಷತಾ ಆಪ್‌ಗಳನ್ನು ಕೂಡ ಬಿಡುಗಡೆ ಮಾಡಿವೆ – ಉದಾಹರಣೆಗೆ MySafetipin, Raksha, 112 India – ಇವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ತಕ್ಷಣದ ಸಹಾಯ ಪಡೆಯಬಹುದಾಗಿದೆ.
ಅಪಾಯದ ಪರಿಸ್ಥಿತಿಯಲ್ಲಿ ಈ ಸಂಖ್ಯೆಗಳು ಮಹಿಳೆಯರಿಗೂ ಮಕ್ಕಳಿಗೂ ಜೀವ ರಕ್ಷಕವಾಗಬಹುದು. ಅದಕ್ಕಾಗಿ ಈಗಲೇ ಈ ಸಂಖ್ಯೆಗಳ ಪಟ್ಟಿಯನ್ನು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿ, ನಿಮ್ಮ ಹಾಗೂ ನಿಮ್ಮ ಪ್ರಿಯಜನರ ಸುರಕ್ಷತೆಯ ಬಗ್ಗೆ ಹೆಚ್ಚು ಜಾಗರೂಕರಾಗಿ.