ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬಿಳಿ ಸ್ರಾವ (Leucorrhoea) ಸಮಸ್ಯೆ ನಿರ್ಲಕ್ಷಿಸಿದರೆ, ದೌರ್ಬಲ್ಯ, ಆಯಾಸ, ತಲೆತಿರುಗುವಿಕೆ ಮತ್ತು ಶರೀರದಲ್ಲಿ ಬಲಹೀನತೆ ಉಂಟುಮಾಡಬಹುದು. ಈ ಸಮಸ್ಯೆಗೆ ನೈಸರ್ಗಿಕ ಪರಿಹಾರವಾಗಿ ಆಯುರ್ವೇದದಲ್ಲಿ ದಾಳಿಂಬೆ (Pomegranate) ಮಹತ್ವವನ್ನು ಉಲ್ಲೇಖಿಸಲಾಗಿದೆ. ದಾಳಿಂಬೆ ರಸದಲ್ಲಿ ಹಾರ್ಮೋನ್ ಸಮತೋಲನದಿಂದ ಹಿಡಿದು ಸೋಂಕು ನಿವಾರಣೆಯವರೆಗೆ ಹಲವು ಗುಣವಿದೆ.
ಉತ್ಕರ್ಷಣ ನಿರೋಧಕ ಶಕ್ತಿಯೊಂದಿಗೆ ದಾಳಿಂಬೆ
ದಾಳಿಂಬೆ ರಸದಲ್ಲಿ ಅಂಶಿಕ ಉತ್ಕರ್ಷಣ ನಿರೋಧಕಗಳು (Antioxidants) ಇರುವುದರಿಂದ ಇದು ದೇಹದಲ್ಲಿನ ಫ್ರೀ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ತಡೆಗಟ್ಟುತ್ತದೆ. ಬಿಳಿ ಸ್ರಾವದಂತಹ ಸಮಸ್ಯೆಗಳಲ್ಲಿ ದೇಹದ ಒಳಾಂಗಗಳ ತೇಜಸ್ಸನ್ನು ಮತ್ತು ಆರೋಗ್ಯವನ್ನು ಕಾಪಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.
ಉರಿಯೂತ ನಿವಾರಕ
ಈ ರಸದಲ್ಲಿ ಉರಿಯೂತ ನಿವಾರಕ (Anti-inflammatory) ಅಂಶಗಳಿವೆ. ಮಹಿಳೆಯರಲ್ಲಿ ಬಿಳಿ ಸ್ರಾವದ ಸಮಸ್ಯೆ ಗರ್ಭಾಶಯ ಅಥವಾ ಯೋನಿಯಲ್ಲಿ ಉರಿಯೂತದಿಂದ ಉಂಟಾಗುತ್ತದಾದರೆ, ದಾಳಿಂಬೆ ರಸ ಸೇವನೆದಿಂದ ಉರಿಯೂತ ಕಡಿಮೆಯಾಗುತ್ತದೆ.
ಸೋಂಕು ನಿವಾರಣೆಗೂ ಸಹಾಯಕ
ದಾಳಿಂಬೆ ರಸದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದ್ದು, ಇದು ಯೋನಿಯ ಭಾಗದಲ್ಲಿ ಉಂಟಾಗುವ ಸೋಂಕು, ತುರಿಕೆ ಅಥವಾ ಅಸಹಜ ಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ.
ದೈನಂದಿನ ಸೇವನೆಯಿಂದ ಫಲ
ದಾಳಿಂಬೆ ರಸವನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನದ ವೇಳೆ ಕುಡಿಯುವುದು ಉತ್ತಮ. ರಸದಲ್ಲಿ ಕಪ್ಪು ಉಪ್ಪು ಅಥವಾ ಕಪ್ಪು ಒಣದ್ರಾಕ್ಷಿ ಸೇರಿಸಿಕೊಂಡರೆ, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಹೊಟ್ಟೆಯುಬ್ಬರ ನಿಯಂತ್ರಣವಾಗಬಹುದು.
ದಾಳಿಂಬೆ ಒಂದು ಸರಳವಾಗಿದ್ದರೂ ಶಕ್ತಿಶಾಲಿ ಹಣ್ಣು. ಬಿಳಿ ಸ್ರಾವದಿಂದ ಬಳಲುತ್ತಿರುವ ಮಹಿಳೆಯರಿಗೆ ಇದು ಆರೈಕೆ ನೀಡುವ ನೈಸರ್ಗಿಕ ಪರಿಹಾರವಾಗಿದೆ. ದಿನನಿತ್ಯ ದಾಳಿಂಬೆ ರಸ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ, ಹಾರ್ಮೋನ್ ಸಮತೋಲನ ಮತ್ತು ಒಟ್ಟಾರೆ ಮಹಿಳಾ ಆರೋಗ್ಯದ ಸುಧಾರಣೆ ಸಾಧ್ಯವಾಗುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)