ಇತ್ತೀಚಿನ ಜನರೇಷನ್ ಜೀ (Gen z ) ಯುಗದ ಹುಡುಗಿಯರು ಎಲ್ಲದರಲ್ಲೂ ಸ್ವಾವಲಂಬನೆ, ಸಮಾನತೆ ಹಾಗೂ ಸಬಲೀಕರಣ ಬಯಸುತ್ತಾರೆ. ವೃತ್ತಿ ಹಾಗೂ ಸ್ವತಂತ್ರ ಜೀವನಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಮದುವೆ ಆದ್ಮೇಲೆ ಕುಟುಂಬ ಮತ್ತು ವೃತ್ತಿ ಎರಡನ್ನೂ ನಿಭಾಯಿಸೋದು ಕಷ್ಟ ಎಂದು ಮದುವೆ ಆಗೋಕೆ ಹಿಂಜರಿಯುತ್ತಿದ್ದಾರೆ.
ಈ ಪೀಳಿಗೆ ಸಾಂಪ್ರದಾಯಿಕ ಮೌಲ್ಯಗಳಿಗಿಂತ ಸ್ವಾತಂತ್ರ್ಯ, ವೃತ್ತಿಪರ ಬೆಳವಣಿಗೆ ಮತ್ತು ವೈಯಕ್ತಿಕ ಸಂತೋಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಇವು ವಿವಾಹದ ಬಗ್ಗೆ ಅವರ ದೃಷ್ಟಿಕೋನವನ್ನು ಬದಲಾಯಿಸುತ್ತಿವೆ.
ಸ್ವಾತಂತ್ರ್ಯದ ಪ್ರಾಮುಖ್ಯತೆ:
ಈ ಪೀಳಿಗೆಯ ಹೆಣ್ಣುಮಕ್ಕಳು ತಮ್ಮ ಜೀವನದ ಮೇಲೆ ತಮ್ಮದೇ ಸ್ವತಂತ್ರ ನಿರ್ಧಾರಗಳು ಮುಖ್ಯವೆಂದು ನಂಬುತ್ತಾರೆ. ವಿವಾಹವು ಅವರ ಸಮಯ ಮತ್ತು ಸ್ವಾತಂತ್ರ್ಯವನ್ನು ನಿರ್ಬಂಧಿಸಬಹುದು ಎಂಬ ಭಯವಿದೆ.
ವೃತ್ತಿಪರ ಗುರಿಗಳು:
ಅವರು ತಮ್ಮ ವಿದ್ಯಾಭ್ಯಾಸ, ಉದ್ಯೋಗ ಮತ್ತು ಉದ್ಯಮದಲ್ಲಿನ ಉನ್ನತ ಮಟ್ಟದ ಸಾಧನೆಗೆ ಆದ್ಯತೆ ನೀಡುತ್ತಿದ್ದಾರೆ. ವಿವಾಹವು ಈ ಗುರಿಗಳನ್ನು ತಡಮಾಡಬಹುದು ಅಥವಾ ನಿರ್ಬಂಧನೆ ತರಬಹುದು ಎಂಬ ಆತಂಕ.
ಆರ್ಥಿಕ ಸ್ವಾವಲಂಬನೆ:
ಹಿಂದಿನ ಪೀಳಿಗೆಯಂತಲ್ಲದ, ಈ ಕಾಲದ ಮಹಿಳೆಯರು ತಮ್ಮ ಹಣಕಾಸು ನಿರ್ವಹಣೆಯಲ್ಲಿ ಸ್ವತಂತ್ರರಾಗಿದ್ದಾರೆ. ಆದ್ದರಿಂದ, ಅವರ ಜೀವನಸಾಥಿಗೆ ಅವಲಂಬಿಸಬೇಕೆಂಬ ಅಗತ್ಯವಿಲ್ಲ.
ಅನುಭವ ಮತ್ತು ಪರೀಕ್ಷೆಗಳ ಅಗತ್ಯ:
ಈಗಿನ ಯುವ ಜನತೆ ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ ಜ್ಞಾನ, ಅನುಭವ ಮತ್ತು ಪರೀಕ್ಷೆಗಳ ಮೂಲಕ ನಿರ್ಧಾರ ಮಾಡಲು ಇಚ್ಛಿಸುತ್ತಾರೆ. ಬೇಗನೇ ವಿವಾಹವಾಗುವುದು ಹಿತಕರವಲ್ಲವೆಂದು ಅವರು ನಂಬುತ್ತಾರೆ.
ಸಾಮಾಜಿಕ ಬದಲಾವಣೆ :
ಹೆಣ್ಣುಮಕ್ಕ್ಳು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಹಳೆಯ ಕಲ್ಪನೆಗಳನ್ನು ಅವರು ತಿರಸ್ಕರಿಸುತ್ತಿದ್ದಾರೆ. ಅವರು ಸಮಾನ ಹಕ್ಕುಗಳು ಮತ್ತು ಹೊಣೆಗಾರಿಕೆಗಳ ವಿವಾಹ ಬಯಸುತ್ತಾರೆ.
ಇವು ಸಮಾಜದಲ್ಲಿ ಬದಲಾವಣೆ ಉಂಟುಮಾಡುತ್ತಿರುವ ಪ್ರಮುಖ ಅಂಶಗಳು. ಇದರಿಂದಾಗಿ Gen z ಯುವ ಹೆಣ್ಣುಮಕ್ಕಳು ವಿವಾಹದ ನಿರ್ಧಾರವನ್ನು ಹೆಚ್ಚು ಯೋಚನೆಮಾಡಿ ತೆಗೆದುಕೊಳ್ಳುತ್ತಿದ್ದಾರೆ.