ಇತ್ತೀಚಿನ ದಿನಗಳಲ್ಲಿ ಅನೇಕ ಹೆಣ್ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಪಿಸಿಒಎಸ್ (PCOS) ಪ್ರಮುಖವಾದುದು. ಅಚ್ಚರಿಯ ಸಂಗತಿ ಎಂದರೆ, ಇದು ಈಗ ಕೇವಲ ವಯಸ್ಕರ ಸಮಸ್ಯೆಯಾಗಿಲ್ಲ; ಕಿರಿಯ ವಯಸ್ಸಿನ ಹುಡುಗಿಯರಲ್ಲೂ ಕಾಣಿಸಿಕೊಳ್ಳುತ್ತಿದೆ. ಬದಲಾಗುತ್ತಿರುವ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ ಮತ್ತು ನಿರಂತರ ಮಾನಸಿಕ ಒತ್ತಡ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ.
ಪಿಸಿಒಎಸ್‌ನ ಸಾಮಾನ್ಯ ಲಕ್ಷಣಗಳು
ಪಿಸಿಒಎಸ್ ಸಮಸ್ಯೆ ಹಾರ್ಮೋನ್‌ಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಮಾಸಿಕ ಚಕ್ರ ಅನಿಯಮಿತವಾಗುವುದು, ಓವರಿಯನ್ ಸಿಸ್ಟ್‌ಗಳು ಉಂಟಾಗುವುದು, ಗರ್ಭಧಾರಣೆಗೆ ತೊಂದರೆ, ಮುಖ ಹಾಗೂ ಎದೆ ಭಾಗದಲ್ಲಿ ಅಸಹಜ ಕೂದಲು ಬೆಳವಣಿಗೆ, ಮೊಡವೆ, ಕೂದಲು ತೆಳುವಾಗುವುದು, ಗಂಡಸರ ಮಾದರಿಯ ಬಕ್ಕ ತಲೆ ಮತ್ತು ತ್ವಚೆಯಲ್ಲಿ ಕಪ್ಪು ಪ್ಯಾಚ್‌ಗಳು ಕಾಣಿಸಿಕೊಳ್ಳಬಹುದು.
ಜೀವನಶೈಲಿ ಮತ್ತು ಆಹಾರದಲ್ಲಿ ಬದಲಾವಣೆ ಅಗತ್ಯ
ಪಿಸಿಒಎಸ್ ಇರುವವರು ಔಷಧ ಚಿಕಿತ್ಸೆ ಜೊತೆಗೆ ಆಹಾರ ಹಾಗೂ ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಂತ ಅಗತ್ಯ. ಸರಿಯಾದ ಆಹಾರ ಕ್ರಮ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿದೆ.
ಪಿಸಿಒಎಸ್‌ಗೆ ಉಪಯುಕ್ತ ಪಾನೀಯಗಳು
- ನಿಂಬೆ–ಶುಂಠಿ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಜೀರ್ಣಕ್ರಿಯೆ ಸುಧಾರಿಸಿ ದೇಹವನ್ನು ಡಿಟಾಕ್ಸ್ ಮಾಡುತ್ತದೆ ಹಾಗೂ ತೂಕ ನಿಯಂತ್ರಣಕ್ಕೆ ಸಹಕಾರಿ.
- ಬಿಸಿ ನೀರಿಗೆ ಆಪಲ್ ಸೈಡರ್ ವಿನೆಗರ್ ಸೇರಿಸಿ ಕುಡಿಯುವುದರಿಂದ ಹಾರ್ಮೋನ್ ಸಮತೋಲನಕ್ಕೆ ಸಹಾಯವಾಗುತ್ತದೆ.
- ಪುದೀನಾ–ಸೌತೆಕಾಯಿ ಡಿಟಾಕ್ಸ್ ನೀರು ದಿನಪೂರ್ತಿ ಚೈತನ್ಯ ನೀಡುತ್ತದೆ. ಸಾಮಾನ್ಯ ಟೀ ಬದಲು ಗ್ರೀನ್ ಟೀ ಸೇವಿಸುವುದು ತೂಕ ಇಳಿಕೆಗೂ ಚರ್ಮದ ಆರೋಗ್ಯಕ್ಕೂ ಒಳ್ಳೆಯದು.
- ಮಲಗುವ ಮುನ್ನ ಹಾಲಿಗೆ ಅರಿಶಿಣ ಸೇರಿಸಿ ಕುಡಿಯುವುದರಿಂದ ಉರಿಯೂತ ಮತ್ತು ದೇಹದ ನೋವು ಕಡಿಮೆಯಾಗುತ್ತದೆ.
ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿಯಂತ್ರಣದ ಮೂಲಕ ಪಿಸಿಒಎಸ್ ಜೊತೆ ಆರೋಗ್ಯಕರ ಜೀವನ ನಡೆಸುವುದು ಸಂಪೂರ್ಣ ಸಾಧ್ಯ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

