ಇಂದಿನ ಫ್ಯಾಷನ್ ಟ್ರೆಂಡ್‌ನಲ್ಲಿ ಹೈ ಹೀಲ್ಸ್ ಹುಡುಗಿಯರ ದಿನನಿತ್ಯದ ಭಾಗವಾಗಿದೆ. ಆಫೀಸ್ ಆಗಲಿ, ಪಾರ್ಟಿ ಆಗಲಿ, ಔಟಿಂಗ್ ಆಗಲಿ ಹೀಲ್ಸ್ ಹಾಕಿದರೆ ಲುಕ್ ಎಲೆಗಂಟ್ ಆಗಿ ಕಾಣಿಸುತ್ತದೆ, ಎತ್ತರ ಹೆಚ್ಚಾಗಿ ತೋರುತ್ತದೆ. ಆದರೆ ವೈದ್ಯಕೀಯ ತಜ್ಞರ ಎಚ್ಚರಿಕೆ ಪ್ರಕಾರ, ಹೆಚ್ಚು ಹೊತ್ತು ಹೀಲ್ಸ್ ಧರಿಸುವುದು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಮಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಹೀಗಾಗಿ ಹೀಲ್ಸ್ ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಮತ್ತು ಏನು ಎಚ್ಚರಿಕೆ ಅಗತ್ಯ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ.
ಹೀಲ್ಸ್ ಧರಿಸುವುದರಿಂದ ಆಗುವ ಅಪಾಯಗಳು
- ಹ್ಯಾಮ್‌ಸ್ಟ್ರಿಂಗ್ ಸ್ನಾಯುಗಳು ನಿರಂತರವಾಗಿ ಸಂಕುಚಿತವಾಗುತ್ತವೆ.
- ಕೀಲುಗಳ ಮೇಲೆ ಅತಿಯಾದ ಒತ್ತಡ ಬೀಳುತ್ತದೆ.
- ಹಿಮ್ಮಡಿಯಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು.
- ನಡುನೋವು, ಬೆನ್ನುಮೂಳೆಯ ಒತ್ತಡ ಮತ್ತು ದೇಹದ ಸಮತೋಲನದ ವ್ಯತ್ಯಾಸ ಹೆಚ್ಚಾಗಬಹುದು.
- ದೀರ್ಘಾವಧಿಯಲ್ಲಿ ನಡೆ, ನಿಂತಿರುವ ಭಂಗಿ ದೋಷಕ್ಕೆ ಕಾರಣವಾಗಬಹುದು.
ಹೀಲ್ಸ್ ಧರಿಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆ
- ಹೀಲ್ಸ್‌ನ್ನು ದೈನಂದಿನ ಬಳಕೆಗೆ ಅಲ್ಲ, ವಿಶೇಷ ಸಂದರ್ಭಗಳಿಗೆ ಮಾತ್ರ ಬಳಸಿರಿ.
- 1–2 ಇಂಚಿನ ಹೀಲ್ಸ್ ಹೆಚ್ಚು ಸುರಕ್ಷಿತ.
- ಉತ್ತಮ ಗುಣಮಟ್ಟದ ಫುಟ್‌ವೇರ್ ಆಯ್ಕೆಮಾಡಿ.
- ಹೀಲ್ಸ್ ಧರಿಸಿದ ನಂತರ ಪಾದಗಳಿಗೆ ವಿಶ್ರಾಂತಿ ನೀಡುವುದು ತಪ್ಪದೇ ಮಾಡಿರಿ.
ಆಕರ್ಷಕತೆಗೆ ಹೀಲ್ಸ್ ಸಹಾಯ ಮಾಡಿದರೂ, ಆರೋಗ್ಯವೇ ಮುಖ್ಯ. ಹೀಗಾಗಿ ಮಿತಿಯಲ್ಲಿ ಬಳಸಿ, ಪಾದಗಳ ಆರೈಕೆ ಮಾಡಿ, ದೀರ್ಘಾವಧಿಯ ಆನಂದಕ್ಕಾಗಿ ದೇಹದ ಆರೋಗ್ಯವನ್ನು ಕಾಪಾಡಿ.

