ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿಗೊಳಿಸಿದ ಬಳಿಕ ದಿನೇ ದಿನೇ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಿದೆ .
ಇತ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಂದು ಮಹಿಳಾ ಭಕ್ತರ ದಂಡೇ ಹರಿದು ಬಂದಿದೆ. ರಾಜ್ಯದ ಬೇರೆ ಬೇರೆ ಭಾಗದಿಂದ ಬಸ್ ನಲ್ಲಿ ಬಂದಿರುವ ಮಹಿಳೆಯರು ಶ್ರೀ ಮಂಜುನಾಥ ಸ್ವಾಮಿಯ ದರುಶನ ಪಡೆದಿದ್ದಾದ್ದರೆ.
ಉಚಿತ ಬಸ್ ಬಳಿಕ ಧರ್ಮಸ್ಥಳ ಬಸ್ಸ್ ನಿಲ್ದಾಣದಲ್ಲಿ ಎಲ್ಲಿ ನೋಡಿದರಲ್ಲಿ ಮಹಿಳೆಯರೇ ತುಂಬಿಕೊಂಡಿರುವ ದೃಶ್ಯ ಕಂಡು ಬಂತು. ಸರ್ಕಾರಿ ಬಸ್ ಹತ್ತಲು ಭಾರೀ ಸಂಖ್ಯೆಯ ಮಹಿಳೆಯರ ನೂಕು ನುಗ್ಗಲು ಉಂಟಾಗಿತ್ತು.