ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಾರ್ಚ್ 4 ರಿಂದ 26 ರವರೆಗೆ ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL) ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಸೋಮವಾರ ಐದು ಡಬ್ಲ್ಯುಪಿಎಲ್ ಫ್ರಾಂಚೈಸಿಗಳಿಗೆ ಇಮೇಲ್ ಕಳುಹಿಸಿರುವ ಬಿಸಿಸಿಐ, ಮೊದಲ ಸೀಸನ್ ಸಂಪೂರ್ಣವಾಗಿ ಮುಂಬೈನ ಎರಡು ಸ್ಥಳಗಳಾದ ಬ್ರಬೋರ್ನ್ ಕ್ರೀಡಾಂಗಣ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂಗ್ ಅಮೀನ್ , ಫೆಬ್ರವರಿ 13 ರಂದು ಮುಂಬೈನಲ್ಲಿ ಆಟಗಾರರ ಹರಾಜು ನಡೆಯಲಿದೆ. 1500 ಆಟಗಾರರು ನೋಂದಾಯಿಸಿಕೊಂಡಿದ್ದಾರೆ ಮತ್ತು ಅಂತಿಮ ಪಟ್ಟಿಯನ್ನು ಈ ವಾರದ ಕೊನೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದುಹೇಳಿದರು.
ಹರಾಜಿನಲ್ಲಿ ಗರಿಷ್ಠ 90 ಆಟಗಾರರನ್ನು ಖರೀದಿಸಲು ಅವಕಾಶವಿದ್ದು, ಪ್ರತಿ ತಂಡವು 15 ರಿಂದ 18 ಆಟಗಾರರನ್ನ ಒಳಗೊಂಡಿರುತ್ತದೆ.