ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ (ನಾರಿ ಶಕ್ತಿ ವಂದನ್ ಮಸೂದೆ) ಭಾರೀ ಮತದೊಂದಿಗೆ ಅಂಗೀಕಾರವಾಗಿದೆ.
ಸ್ಲಿಪ್ ಮತದಾನದಲ್ಲಿ ಮಸೂದೆಯನ್ನು ಬೆಂಬಲಿಸಿ 454 ಹಾಗೂ ವಿರುದ್ಧವಾಗಿ 2 ಮತಗಳು ಚಲಾವಣೆಯಾದವು. ಇದೀಗ ನಾಳೆ (ಗುರುವಾರ) ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುವುದು.
ರಾಜ್ಯಸಭೆಯಲ್ಲೂ ಮಸೂದೆಗೆ ಗ್ರೀನ್ಸಿಗ್ನಲ್ ಸಿಕ್ಕ ಬಳಿಕ ರಾಷ್ಟ್ರಪತಿಗಳ ಅನುಮೋದನೆಗೆ ಹೋಗಲಿದೆ. ರಾಷ್ಟ್ರಪತಿಗಳ ಒಪ್ಪಿಗೆ ದೊರೆತ ಬಳಿಕ ಇದು ಕಾನೂನಾಗಿ ರೂಪುಗೊಳ್ಳಲಿದೆ.
ಮಸೂದೆ ಮೇಲಿನ ಚರ್ಚೆಯಲ್ಲಿ 60 ಸಂಸದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಒಬಿಸಿ ಮೀಸಲಾತಿ ಇಲ್ಲದೆ ಈ ಮಸೂದೆ ಅಪೂರ್ಣ ಎಂದು ರಾಹುಲ್ ಗಾಂಧಿ ಹೇಳಿದರು. ಈ ಬಗ್ಗೆ ಮಾತನಾಡಿದ ಅಮಿತ್ ಶಾ, ಈ ಮೀಸಲಾತಿ ಸಾಮಾನ್ಯ, ಎಸ್ಸಿ ಮತ್ತು ಎಸ್ಟಿಗೆ ಸಮಾನವಾಗಿ ಅನ್ವಯಿಸುತ್ತದೆ. ಚುನಾವಣೆ ಮುಗಿದ ಕೂಡಲೇ ಜನಗಣತಿ ಮತ್ತು ಡಿಲಿಮಿಟೇಶನ್ ನಡೆಯಲಿದ್ದು, ಸದನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೀಘ್ರದಲ್ಲಿ ಹೆಚ್ಚಾಗಲಿದೆ. ಪ್ರತಿಭಟನೆಯಿಂದ ಮೀಸಲಾತಿ ಶೀಘ್ರ ಬರುವುದಿಲ್ಲ ಎಂದು ಈ ವೇಳೆ ತಿಳಿಸಿದ್ದಾರೆ.