ಮದುವೆಗೆ ಯಾಕೆ ಬರೋಕಾಗೋದಿಲ್ಲ? ಹೇಗೂ ವರ್ಕ್ ಫ್ರಮ್ ಹೋಮ್ ತಾನೆ? ಮದುವೆಗೆ ರೆಡಿ ಆಗಿ ಬಂದು ಮೂಲೆಲಿ ಕೂತು ಲ್ಯಾಪ್‌ಟಾಪ್ ಹಿಡ್ಕೊಂಡ್ರೆ ಆಯ್ತು, ಆಗಾಗ ಬಂದು ಹೋದವರಿಗೆ ಹೈ, ಹಲೋ, ಮಧ್ಯ ಮಧ್ಯ ಒಂದು ಸೆಲ್ಫಿ, ಮದುವೆಯನ್ನೂ ಅಟೆಂಡ್ ಮಾಡಿದ ಹಾಗಾಯ್ತು, ಕೆಲಸಾನೂ ಮುಗೀತು!
ಬೆಸ್ಟ್ ಫ್ರೆಂಡ್ ಮಗುವಿನ ಮೊದಲ ಹುಟ್ಟುಹಬ್ಬ, ನಾನಿಲ್ಲದೇ ಹೋದ್ರೆ ಅವಳೇನು ಮಾಡ್ತಾಳೆ, ಸಪೋರ್ಟ್ ಬೇಕಲ್ವಾ? ಆದರೆ ಕೆಲಸ? ರಜೆ ಕೇಳೋಕಾಗತ್ತೋ ಇಲ್ವೋ? ಅರ್ಧ ದಿನ ರಜೆ ಕೇಳಿದ್ರೆ? ಹೇಗೋ ಮ್ಯಾನೇಜ್ ಮಾಡಿ ಶಿಫ್ಟ್ ಮುಗಿಸಿ ಬರ್ಥ್‌ಡೇಗೆ ಹೋದ್ರೆ?
ಎರಡೂ ಸಂದರ್ಭವನ್ನು ಗಮನಿಸಿ, ನೀವು ಎಲ್ಲಿಯೂ ವರ್ಕ್ ಲೈಫ್ ಬ್ಯಾಲೆನ್ಸ್ ಮಾಡುತ್ತಿಲ್ಲ. ಮನೆಯಿಂದ ಕೆಲಸ ಎಂದ ತಕ್ಷಣ ಎಲ್ಲಿಗಾದರೂ ಹೋಗಬಹುದು ಅಲ್ಲಿ ಕೆಲಸ ಮಾಡಬಹುದು ಎಂದರೆ ನಿಮ್ಮ ಕೆಲಸದ ಕ್ವಾಲಿಟಿ ಕಡಿಮೆಯಾಗೋದಿಲ್ವಾ?
ಇನ್ನು ಮನೆಯಲ್ಲಿ ಮುಖ್ಯವಾದ ಕಾರ್ಯಕ್ರಮ ಇದ್ದಾಗ ಮನೆಯವರಿಗೂ ಟೈಮ್ ಕೊಡದೇ ಕೆಲಸವನ್ನೂ ಸರಿಯಾಗಿ ಮಾಡದೇ? ಇದೆಲ್ಲಾ ಯಾಕೆ? ಅಷ್ಟು ಮುಖ್ಯವಾದ ಯಾವುದೇ ಕಾರ್ಯಕ್ರಮ ಇದ್ದಾಗ ವಾರದ ಮುಂಚೆಯೇ ರಜೆ ಕೇಳಬಹುದಲ್ಲಾ? ಹಾಯಾಗಿ ನಿಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆಯಬಹುದು. ವರ್ಕ್ ಹಾಗೂ ಲೈಫ್ ಎರಡನ್ನೂ ಹೀಗೆ ಮ್ಯಾನೇಜ್ ಮಾಡಿ..
ನಿಮ್ಮದಲ್ಲದ ಕೆಲಸಕ್ಕೆ ‘ನೋ’ ಹೇಳೋದನ್ನು ಕಲಿಯಿರಿ, ಎಲ್ಲ ಕೆಲಸವನ್ನು ತಲೆಯ ಮೇಲೆ ಹಾಕಿಕೊಂಡರೆ ಕ್ವಾಲಿಟಿ ಕಡಿಮೆಯಾಗಿ, ನಿಮ್ಮ ಕೆಲಸದ ಮೇಲೆ ನೆಗೆಟಿವ್ ಇಂಪ್ರೆಷನ್ ಬರುತ್ತದೆ.
ಒಂದೇ ಸಮನೆ, ಸಣ್ಣ ಬ್ರೇಕ್ ಕೂಡ ಇಲ್ಲದೆ ಕೆಲಸ ಮಾಡಬೇಕು, ನಿಮ್ಮ ಬ್ರೇನ್‌ಗೆ ಕ್ರಿಯೇಟಿವ್ ಆಗಿ ಯೋಚನೆ ಮಾಡಲು ಸಮಯ ಬೇಕಲ್ವಾ? ನಿಮ್ಮ ಒತ್ತಡ ಕಡಿಮೆ ಮಾಡೋದಕ್ಕೆ, ಸಮಸ್ಯೆಗೆ ಪರಿಹಾರ ಕಂಡುಹಿಡಿಯೋದಕ್ಕೆ, ಆಫೀಸ್ ಕೆಲಸ ಖುಷಿ ಕೊಡೋದಕ್ಕೆ ಇದರಿಂದ ಸಹಾಯ ಆಗುತ್ತದೆ.
ಲಂಚ್ ಬ್ರೇಕ್‌ನಲ್ಲಿಯೂ ಕೆಲಸ ಮಾಡಬೇಕು, ಕೊಲೀಗ್ಸ್ ಜೊತೆ ಕುಳಿತು ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಿ, ಪಾಸಿಟಿವ್ ಎನರ್ಜಿ ಪಡೆಯಿರಿ.
ಎಷ್ಟೋ ಸಮಸ್ಯೆಗಳಿಗೆ ಮಾತುಕತೆಯೇ ಉತ್ತರ. ನಿಮ್ಮ ಬಾಸ್ ಅಥವಾ ಟೀಂ ಹೆಡ್ ಬಳಿ ನಿಮಗೆ ಯಾವ ರೀತಿ ಕೆಲಸ ಬೇಕು, ರಜೆ ಬಗ್ಗೆ, ಹೈಕ್ ಬಗ್ಗೆ ಮುಕ್ತವಾಗಿ ಮಾತನಾಡಿ, ಅವರಿಗೂ ನಿಮ್ಮ ಬಗ್ಗೆ ಅರ್ಥವಾಗುತ್ತದೆ, ನಿಮಗೂ ಕೆಲಸ ಸುಲಭವಾಗುತ್ತದೆ.
ಆರೋಗ್ಯದ ಬಗ್ಗೆ ಗಮನ ಇರಲಿ, ಗಂಟೆಗಟ್ಟಲೆ ಕೂತೇ ಇರುವುದು, ನಿಂತೇ ಇರುವುದು, ಎಲ್ಲ ಒತ್ತಡ ತಲೆ ಮೇಲೆ ತೆಗೆದುಕೊಳ್ಳುವುದು, ಮಾನಸಿಕ ಕಿರುಕುಳ ಅನುಭವಿಸುವುದು, ಬ್ರೇಕ್ ಇಲ್ಲದಂತೆ ಕೆಲಸ ಮಾಡುವುದು, ಯಾರ ಬಳಿಯೂ ಮಾತನಾಡದಂತೆ ಕೆಲಸ ಮಾಡುವುದು, ಕೆಲಸದ ಬಗ್ಗೆ ಕೃತಜ್ಞತೆ ಇಲ್ಲದಿರುವುದು ಒಳ್ಳೆಯದಲ್ಲ.
ಕೆಲಸದ ಸಮಯದಲ್ಲಿ ಪರ್ಸನಲ್ ಲೈಫ್ ಇನ್ವಾಲ್ಸ್ ಮಾಡಬೇಡಿ, ಒಂದೆರಡು ಫೋನ್‌ಕಾಲ್ ಪರವಾಗಿಲ್ಲ, ಆದರೆ ಮನೆಯಲ್ಲಿ ನಡೆದ ಯಾವುದೋ ಘಟನೆಯಿಂದ ಕೆಲಸದಲ್ಲಿ ತಪ್ಪು ಮಾಡುವುದು ಸರಿಯಲ್ಲ. ಹಾಗೇ ಆಫೀಸ್ ಒತ್ತಡವನ್ನು ಮನೆಯವರ ಮೇಲೆ ಹಾಕುವುದೂ ಒಳಿತಲ್ಲ.
ಸರಿಯಾದ ಟೈಮ್‌ಗೆ ಲಾಗಿನ್, ಲಾಗೌಟ್ ಆಗಿ, ಅವಶ್ಯಕತೆ ಇದ್ದ ಸಮಯದಲ್ಲಿ ಪರವಾಗಿಲ್ಲ. ಆದರೆ ಕೆಲಸವನ್ನು ಕೆಲಸದಂತೆ ನೋಡಿ, ಅತಿಯಾಗಿ ದುಡಿಯುವುದು ಬೇಡ, ಕೃತಜ್ಞತೆಯಿಂದ ಕೊಟ್ಟ ಕೆಲಸವನ್ನು ಮಾಡಿದರೆ ಸಾಕು. ಜನ ನೀವು ಯಾವ ರೀತಿಯ ವ್ಯಕ್ತಿ, ಸ್ಪಂದನೆ ಹೇಗಿತ್ತು ಎಂದು ನಿಮ್ಮನ್ನು ನೆನೆಪಿಡುತ್ತಾರೆಯೇ ಹೊರತು, ದಿನವೂ ಒಂದು ನಿಮಿಷ ಲೇಟಾಗಿ ಆಫೀಸ್‌ಗೆ ಬರುತ್ತಿರಲಿಲ್ಲ ಎಂದು ನೆನಪಿಡೋದಿಲ್ಲ.