ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನದಿಂದ ದಿನಕ್ಕೆ ಕೆಲಸದ ಒತ್ತಡಗಳು ಹೆಚ್ಚಾಗುತ್ತಿದ್ದು, ಇದರ ಪರಿಣಾಮ ಆರೋಗ್ಯದ ಮೇಲೆ ಬೀರುತ್ತಿದೆ. ಹೀಗಾಗಿ ಮೆಂಟಲ್ ಹೆಲ್ತ್ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ನಗರದ ನಿಮ್ಯಾನ್ಸ್ ಆಸ್ಪತ್ರೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ, ಈ ವರ್ಷವು ಮೆಂಟಲ್ ಹೆಲ್ತ್ ಸಮಸ್ಯೆ ಹೆಚ್ಚಾಗಿದೆ ಎನ್ನಲಾಗಿದೆ.
ಕೊರೋನಾ ಸಮಯದಲ್ಲಿ ಆದ ಆರ್ಥಿಕ ಸಮಸ್ಯೆಗಳಿಂದ ಜನ ಈಗಲೂ ಚೇತರಿಸಿಕೊಳ್ಳುತ್ತಿದ್ದಾರೆ, ಎಷ್ಟೋ ಜನ ತಮಗೆ ಇಷ್ಟ ಇಲ್ಲದ ಕೆಲಸಗಳನ್ನು ಮಾಡುತ್ತಿದ್ದಾರೆ. ದಿನಕ್ಕೆ ಅತಿ ಹೆಚ್ಚು ಸಮಯ ಕೆಲಸದಲ್ಲಿ ಕಳೆಯುವುದು, ಮನೆಯವರ ಜೊತೆ ಸಮಯ ನೀಡದಿರುವುದು, ಆರ್ಥಿಕ ಒತ್ತಡ ಇನ್ನಿತರ ಸಮಸ್ಯೆಗಳನ್ನು ಅನುಭವಿಸಿ, ಒತ್ತಡ, ಡಿಪ್ರೆಶನ್‌ಗೆ ಹೋಗುತ್ತಿದ್ದಾರೆ. ದೈಹಿಕ ಆರೋಗ್ಯಕ್ಕೆ ಕೊಡುವಷ್ಟು ಗಮನ ಯಾರೂ ಮಾನಸಿಕ ಆರೋಗ್ಯಕ್ಕೆ ನೀಡುತ್ತಿಲ್ಲ.
ಆತಂಕ, ಅನಾವಶ್ಯಕ ಕೋಪ, ನಿದ್ರಾಹೀನಾತೆ, ಟೆಕ್ಷನ್, ಜಿಗುಪ್ಸೆ, ಕುಟುಂಬ ಕಲಹ, ಲವ್ ಬ್ರೇಕಪ್ಸ್, ಮಾನಸಿಕ ಸಮಸ್ಯೆ ಹಾಗೂ ಖಿನ್ನತೆಯಂತಹ ಸಮಸ್ಯೆಗಳು ನಮ್ಮ ಮನೆಯವರಲ್ಲಿ ಅಥವಾ ಸ್ನೇಹಿತರಲ್ಲಿ ಕಂಡುಬರುತ್ತಿದ್ದರೆ ಅದನ್ನು ಇಗ್ನೋರ್ ಮಾಡಬೇಡಿ. ವೈದ್ಯರ ಬಳಿ ಸಲಹೆ ಪಡೆಯಿರಿ. ಬೆಂಗಳೂರು ನಗರದ ನಿಮಾನ್ಸ್ ಆಸ್ಪತ್ರೆಗೆ ಪ್ರತಿವರ್ಷ 6 ಲಕ್ಷಕ್ಕೂ ಹೆಚ್ಚು ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ದಾಖಲಾಗಿದ್ದಾರೆ.