ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಅನುವಾದಕರಾಗಿ ಕೆಲಸ ಮಾಡುವುದು ಅತ್ಯಂತ ಅಪಾಯಕಾರಿ ಹಾಗೂ ಕಷ್ಟದ ಕೆಲಸ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದ ಕೋಯಿಕ್ಕೋಡ್ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಪ್ರಚಾರದ ವೇಳೆ ಭಾಷಾಂತರವು ಹೇಗೆ ಸಮಸ್ಯೆಯನ್ನುಂಟು ಮಾಡಿತ್ತು ಎಂಬುದರ ಕುರಿತು ಮಾತನಾಡಿದ್ದಾರೆ.
ತೆಲಂಗಾಣ ಚುನಾವಣೆ ಪ್ರವಾರದ ವೇಳೆ ನಾನು ಹಿಂದಿಯಲ್ಲಿ ಮಾತನಾಡಿದಾಗ ಅಲ್ಲಿ ತೆಲುಗಿನಲ್ಲಿ ಭಾಷಾಂತರ ಮಾಡುತ್ತಿದ್ದರು. ನಾನು ಚಿಕ್ಕದಾಗಿ ಹೇಳಿದರು ಅಲ್ಲಿ ಬೇರೆ ಏನನ್ನೋ ಹೇಳಲಾಗುತ್ತಿತ್ತು. ಇದನ್ನು ಅರಿತ ನಾನು ಪದಗಳ ಲೆಕ್ಕ ಇಡಲು ಶುರು ಮಾಡಿದೆ. ನಾನು ಐದು ಪದಗಳಲ್ಲಿ ಒಂದು ವಾಕ್ಯ ಮುಗಿಸಿದರೆ ಅವರು 25-30 ಪದಗಳಲ್ಲಿ ಅದನ್ನು ಹೇಳುತ್ತಿದ್ದರು.
ಕೆಲವೊಂದು ಬಾರಿ ನಾನು ನೀರಸವಾಗಿರುವ ವಿಚಾರ ಏನಾದರೂ ಹೇಳಿದರೆ ಜನರು ಹುಚ್ಚೆದ್ದು ಕುಣಿಯುತ್ತಾರೆ. ಇನ್ನು ಕೆಲವೊಮ್ಮೆ ಒಳ್ಳೆಯ ವಿಚಾರ ಹೇಳಿದರೆ ಅದಕ್ಕೆ ನೀರಸ ಪ್ರತಿಕ್ರಿಯೆ ನೀಡುತ್ತಾರೆ. ಇದು ನನಗೆ ತುಂಬಾ ನಗು ತರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಾಂತರದ ಕುರಿತು ತಮ್ಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.