ವಿಶ್ವ ಸ್ತನ್ಯಪಾನ ಸಪ್ತಾಹ: ತಾಯಿ ಹಾಲಿನ ಮಹತ್ವ, ಜಾಗೃತಿ ಮೂಡಿಸುವ ವಾರ!

ಪ್ರತಿ ವರ್ಷ ಆಗಸ್ಟ್ 1 ರಿಂದ 7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ (World Breastfeeding Week) ಆಚರಿಸಲಾಗುತ್ತದೆ. ತಾಯಂದಿರಿಗೆ ಮಕ್ಕಳಿಗೆ ಎದೆಹಾಲುಣಿಸುವ ಮಹತ್ವದ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಶಿಶುಗಳ ಆರೋಗ್ಯ ಮತ್ತು ಬೆಳವಣಿಗೆಗೆ ಎದೆಹಾಲಿನ ಪಾತ್ರವನ್ನು ಗಂಭೀರವಾಗಿ ಒತ್ತಿಹೇಳಲಾಗುತ್ತದೆ.

ಸ್ತನ್ಯಪಾನದ ಪ್ರಯೋಜನಗಳು ಮತ್ತು ಮಗುವಿಗೆ ಹಾಲುಣಿಸಲು ತಾಯಂದಿರನ್ನು ಪ್ರೇರೇಪಿಸುವ ಸಲುವಾಗಿ 1991ರಲ್ಲಿ ವರ್ಲ್ಡ್ ಅಲೈಯನ್ಸ್ ಫಾರ್ ಬ್ರೆಸ್ಟ್ ಫೀಡಿಂಗ್ ಆಕ್ಷನ್ (WABA) ಅನ್ನು ರಚಿಸಲಾಯಿತು. ಆರಂಭದಲ್ಲಿ ವರ್ಷಕ್ಕೆ ಒಂದು ದಿನ ಸ್ತನ್ಯಪಾನ ದಿನವನ್ನು ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಈ ವಿಷಯವು ಸಾಮಾನ್ಯ ಜೀವನ ಮತ್ತು ಮಕ್ಕಳ ಆರೋಗ್ಯದಂತಹ ಸಮಸ್ಯೆಗಳಿಗೆ ಸಂಬಂಧಿಸಿರುವುದರಿಂದ ಅದರ ಉಪಯುಕ್ತತೆ ಮತ್ತು ಅಗತ್ಯವನ್ನು ಪರಿಗಣಿಸಿ, ಒಂದು ವಾರಗಳ ಕಾಲ ಈ ಜಾಗೃತಿ ಕಾರ್ಯವನ್ನು ಆಚರಿಸಲು ನಿರ್ಧರಿಸಲಾಯಿತು.

ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಮೊದಲ ಬಾರಿಗೆ 1992ರಲ್ಲಿ ಆಯೋಜಿಸಲಾಯಿತು. ಅಲ್ಲಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುನಿಸೆಫ್ (UNICEF) ಸಂಸ್ಥೆಗಳು ಈ ಅಭಿಯಾನವನ್ನು ಜಾಗತಿಕ ಮಟ್ಟದಲ್ಲಿ ಪ್ರೋತ್ಸಾಹಿಸುತ್ತಿವೆ. ತಾಯಂದಿರಿಗೆ ಎದೆಹಾಲುಣಿಸಲು ಅಗತ್ಯವಿರುವ ಸೌಕರ್ಯ ಮತ್ತು ಬೆಂಬಲ ನೀಡುವ ಗುರಿಯನ್ನು ಈ ಸಪ್ತಾಹ ಹೊಂದಿದೆ.

ಪ್ರತಿ ವರ್ಷ ಈ ಸಪ್ತಾಹಕ್ಕೆ ವಿಭಿನ್ನ ಥೀಮ್‌ಗಳಿರುತ್ತವೆ, ಅದು ಸ್ತನ್ಯಪಾನಕ್ಕೆ ಸಹಾಯಕ ವಾತಾವರಣ ನಿರ್ಮಾಣ ಮಾಡುವುದರ ಮಹತ್ವವನ್ನೂ ತೋರುತ್ತದೆ. ಈ ವರ್ಷವೂ ಜಾಗತಿಕ ಆರೋಗ್ಯ ಸಂಸ್ಥೆಗಳು ಸ್ತನ್ಯಪಾನದ ಪ್ರಯೋಜನಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

ತಾಯಿ ಹಾಲು ಶಿಶುಗಳಿಗೆ ಜೀವಸತ್ವಗಳಿಂದ ಕೂಡಿದ ಸಂಪೂರ್ಣ ಆಹಾರವಾಗಿದೆ. ಇದು ನವಜಾತ ಶಿಶುಗಳ ಇಮ್ಮ್ಯೂನ್ ಶಕ್ತಿಯನ್ನು ಹೆಚ್ಚಿಸಿ, ಡೈರಿಯ, ಉಸಿರಾಟದ ತೊಂದರೆಗಳು ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ನೀಡುತ್ತದೆ. ಅದೇ ಸಮಯದಲ್ಲಿ ತಾಯಿಗೆ ತೂಕ ಇಳಿಕೆ, ಮಾಂಸಖಂಡಗಳ ಬಲವರ್ಧನೆ, ಮಗುವಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಂಥಾ ಅನೇಕ ಲಾಭಗಳನ್ನು ನೀಡುತ್ತದೆ.

ವಿಶ್ವ ಸ್ತನ್ಯಪಾನ ಸಪ್ತಾಹವು ತಾಯಂದಿರಿಗೆ ಸ್ಪೂರ್ತಿ ನೀಡುವ ಜೊತೆಗೆ, ಸಮಾಜದಾದ್ಯಂತ ಎದೆಹಾಲುಣಿಸುವ ಕುರಿತು ಹೊಸ ಅರಿವು ಮೂಡಿಸಲು ಸಹಾಯಕವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!