ನಾಳೆಯಿಂದ ವಿಶ್ವಕಪ್​ನ ಅರ್ಹತಾ ಪಂದ್ಯಾವಳಿ: ಎರಡು ಸ್ಥಾನಕ್ಕೆ 10 ತಂಡಗಳ ಪೈಪೋಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ 2023ಕ್ಕೆ ಎಂಟು ತಂಡಗಳು ನಿರ್ಣಯ ಆಗಿದ್ದು, ಎರಡು ತಂಡಗಳು 9 ಮತ್ತು 10ನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಇದಕ್ಕಾಗಿ ಜಿಂಬಾಬ್ವೆಯಲ್ಲಿ 10 ತಂಡಗಳು ಪೈಪೋಟಿಗೆ ಇಳಿಯಲಿದೆ. 2023ರ ವಿಶ್ವಕಪ್​ಗಾಗಿ ನಾಳೆಯಿಂದ ಅರ್ಹತಾ ಪಂದ್ಯ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಮತ್ತು ನೇಪಾಳ ಮುಖಾಮುಖಿಯಾಗಲಿವೆ.

ಐದು ತಂಡಗಳ ‘ಎ’ ಮತ್ತು ‘ಬಿ’ ಗುಂಪುಗಳನ್ನು ಮಾಡಲಾಗಿದೆ. ಎ ಗುಂಪಿನಲ್ಲಿ ವೆಸ್ಟ್​ ಇಂಡೀಸ್​, ಜಿಂಬಾಬ್ವೆ, ನೆದರ್​ಲ್ಯಾಂಡ್, ನೇಪಾಳ ಮತ್ತು ಅಮೆರಿಕಾ ಆಡಲಿದೆ. ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್​ ಸ್ಕಾಟ್​ಲ್ಯಾಂಡ್​, ಒಮನ್​ ಮತ್ತು ಯುಎಇ ಸ್ಪರ್ಧಿಸಲಿವೆ. ವಿಶ್ವ ಕಪ್​ ಗೆದ್ದ ತಂಡಗಳಾದ ಶ್ರೀಲಂಕಾ ಮತ್ತು ವೆಸ್ಟ್​ ಇಂಡೀಸ್​ಗೆ ಈ ಬಾರಿ ಕಠಿಣ ಸವಾಲಿರುವುದಂತೂ ಖಂಡಿತ. ಜಿಂಬಾಬ್ವೆ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅದರ ಜೊತೆಗೆ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡುತ್ತಿರುವುದು ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.

ವಿಶ್ವಕಪ್​ನ ಅರ್ಹತಾ ಪಂದ್ಯಾವಳಿಯ ವೇಳಾಪಟ್ಟಿ
2023ರ ಜೂನ್ 18ರಿಂದ ಜೂನ್​ 27ರ ವರೆಗೆ ಏಕ ಮುಖಾಮುಖಿಯ ಲೀಗ್​ ಪಂದ್ಯಗಳು ನಡೆಯಲಿದ್ದು, ಜೂನ್​ 29ರ ನಂತರ ಸೂಪರ್​ ಸಿಕ್ಸ್​, ಪ್ಲೇ ಆಫ್​ ಮತ್ತು ಫೈನಲ್​ ಪಂದ್ಯಗಳು ನಡೆಯಲಿದೆ. ಫೈನಲ್​ ಪಂದ್ಯ ಜುಲೈ 9 ಭಾನುವಾರ ನಡೆಯಲಿದೆ. ಇದರಲ್ಲಿ ಅಂತಿಮವಾಗಿ ಆಡುವ ಎರಡು ತಂಡಗಳು ಅಕ್ಟೋಬರ್ ಮತ್ತು ನವೆಂಬರ್​ನಲ್ಲಿ ನಡೆಯುವ ವಿಶ್ವಕಪ್​ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!