ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಇಂದಿನಿಂದ ಚಾಲನೆ: ಎಷ್ಟು ದಿನ ನಡೆಯಲಿದೆ ಮಹೋತ್ಸವ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಇಂದು ಚಾಲನೆ ದೊರೆಯಲಿದೆ. 11 ದಿನಗಳ ಕರಗ ಮಹೋತ್ಸವಕ್ಕೆ ಸಕಲ ತಯಾರಿ ನಡೆದಿದ್ದು, ಈ ಬಾರಿಯೂ ಎ. ಜ್ಞಾನೇಂದ್ರ ಕರಗ ಹೊರಲಿದ್ದಾರೆ.

ಬೆಂಗಳೂರಿನ ಇತಿಹಾಸ ಸಾರುವ ಐತಿಹಾಸಿಕ ಕರಗ ಏಪ್ರಿಲ್ 14 ರವರೆಗೆ ನಡೆಯಲಿದೆ. ಧರ್ಮರಾಯ ಸ್ವಾಮಿ ದೇವಸ್ಥಾನದ ಕರಗ ಮಹೋತ್ಸವಕ್ಕೆ ಇಂದು ರಾತ್ರಿ 10 ಗಂಟೆಗೆ ಧ್ವಜರೋಹಣ ಮಾಡುವುದರ ಮೂಲಕ ಚಾಲನೆ ದೊರೆಯಲಿದೆ.

ಏಪ್ರಿಲ್ 4 ರಥೋತ್ಸವ ಹಾಗೂ ಧ್ವಜಾರೋಹಣ. ಏಪ್ರಿಲ್ 5 ರಿಂದ ಏಪ್ರಿಲ್ 8 ರ ತನಕ ಪ್ರತಿದಿನ ವಿಶೇಷ ಪೂಜೆ. ಏಪ್ರಿಲ್ 9ರಂದು ಆರತಿ ದೀಪಗಳು. ಏಪ್ರಿಲ್ 10 ಹಸಿ ಕರಗ. ಏಪ್ರಿಲ್ 11ರಂದು ಪೋಂಗಲ್ ಸೇವೆ. ಏಪ್ರಿಲ್ 12 ಕರಗ ಶಕ್ತ್ಯೋತ್ಸವ & ಧರ್ಮರಾಯಸ್ವಾಮಿ ರಥೋತ್ಸವ. ಏಪ್ರಿಲ್ 13 ಪುರಾಣ ಪ್ರವಚನ ಹಾಗೂ ದೇವಸ್ಥಾನದಲ್ಲಿ ಗಾವು ಶಾಂತಿ. ಏಪ್ರಿಲ್ 14 ವಸಂತೋತ್ಸವ ಧ್ವಜಾರೋಹಣ. ಇವೆಲ್ಲವೂ ಈ ಬಾರಿಯ ಬೆಂಗಳೂರು ಕರಗ ಮಹೋತ್ಸವದಲ್ಲಿ ಜರುಗುವ ಕಾರ್ಯಕ್ರಮಗಳ ವೇಳಾಪಟ್ಟಿಯಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!