ಪ್ರತಿ ವರ್ಷ ಸೆಪ್ಟೆಂಬರ್ 22 ರಂದು ವಿಶ್ವ ಘೇಂಡಾಮೃಗ ದಿನ (World Rhino Day) ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಘೇಂಡಾಮೃಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಅವರ ಕಳ್ಳಸಾಗಣಿಕೆ ಮತ್ತು ಬೇಟೆಯನ್ನು ತಡೆಯಲು ಕ್ರಮ ಕೈಗೊಳ್ಳುವುದು, ಮತ್ತು ಅವರ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವ ಮಹತ್ವವನ್ನು ತೋರಿಸುವುದಾಗಿದೆ.
ಘೇಂಡಾಮೃಗಗಳ ಕೊಂಬುಗಳಿಗೆ ಹೆಚ್ಚಿನ ಬೇಡಿಕೆಯ ಕಾರಣದಿಂದಾಗಿ ಚೀನಾ, ವಿಯೆಟ್ನಾಂ, ಕೊರಿಯಾ ಮತ್ತು ಮಲೇಷ್ಯಾ ಸೇರಿದಂತೆ ಅನೇಕ ದೇಶಗಳಲ್ಲಿ ಕಳ್ಳಸಾಗಣಿಕೆ ವ್ಯಾಪಕವಾಗಿದೆ. ಕೊಂಬುಗಳನ್ನು ಔಷಧಿ ತಯಾರಿಕೆ ಅಥವಾ ಆಭರಣದಲ್ಲಿ ಬಳಸುವಂತಹ ಬೇಡಿಕೆ, ಈ ಪ್ರಾಣಿಗಳ ಸಂಖ್ಯೆಯನ್ನು ಅಪಾಯದಲ್ಲಿರುವಂತೆ ಮಾಡುತ್ತಿದೆ.
1990 ರ ವೇಳೆಗೆ ದಕ್ಷಿಣ ಆಫ್ರಿಕಾದಲ್ಲಿ ಘೇಂಡಾಮೃಗಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. 2010 ರ ವೇಳೆಗೆ ಜಗತ್ತಿನಲ್ಲಿ ಕೇವಲ 30,000 ಘೇಂಡಾಮೃಗಗಳು ಬದುಕಿದವು. ಈ ಪರಿಸ್ಥಿತಿಯಿಂದ ಜಾಗೃತಿಗೊಳ್ಳಲು, ವಿಶ್ವ ವನ್ಯಜೀವಿ ನಿಧಿ (WWF) 2010 ರಲ್ಲಿ ಸೆಪ್ಟೆಂಬರ್ 22 ರನ್ನು ಘೇಂಡಾಮೃಗ ದಿನವಾಗಿ ಘೋಷಿಸಿತು. 2011 ರಲ್ಲಿ ಲಿಸಾ ಜೇನ್ ಕ್ಯಾಂಪ್ಬೆಲ್ ಮತ್ತು ರಿಶ್ಜಾ ಅಂತಾರಾಷ್ಟ್ರೀಯ ಸಹಭಾಗಿತ್ವದೊಂದಿಗೆ ಈ ದಿನವನ್ನು ಜಾಗತಿಕ ಮಟ್ಟದ ಕಾರ್ಯಕ್ರಮವಾಗಿ ಪರಿಗಣಿಸಿದರು.
ಈ ದಿನದ ಆಚರಣೆಯಲ್ಲಿ ಸಾರ್ವಜನಿಕರಿಗೆ ಕಳ್ಳಸಾಗಣೆ ತಡೆಯುವ ಮಹತ್ವ, ಪರಿಸರ ಸಮತೋಲನ ಕಾಯ್ದುಕೊಳ್ಳುವ ಅಗತ್ಯ, ಮತ್ತು ಘೇಂಡಾಮೃಗಗಳ ರಕ್ಷಣೆಗಾಗಿ ಕೈಗೊಂಡ ನಡೆಯುವ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸರ್ಕಾರಗಳು, ಸಂರಕ್ಷಣಾ ಸಂಸ್ಥೆಗಳು ಮತ್ತು ಸಮುದಾಯಗಳು ಶೈಕ್ಷಣಿಕ ಕಾರ್ಯಕ್ರಮಗಳು, ನಿಧಿ ಸಂಗ್ರಹಣೆ ಅಭಿಯಾನಗಳು, ಮತ್ತು ಜಾಗೃತಿ ಶಿಬಿರಗಳ ಮೂಲಕ ಈ ದಿನವನ್ನು ಆಚರಿಸುತ್ತವೆ.