ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಂತಿ ಸಭೆ ನಂತರವೂ ರಷ್ಯಾ-ಉಕ್ರೇನ್ ಯುದ್ಧ ಮುಂದುವರಿಸಿದ್ದು, ರಷ್ಯಾದ ಆಕ್ರಮಣಾಕಾರಿ ದಾಳಿಯನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ವಿರೋಧಿಸಿದೆ.
ಪುಟ್ಟ ಉಕ್ರೇನ್ ಮೇಲೆ ರಷ್ಯಾ ಎಲ್ಲ ಕಡೆಗಳಿಂದಲೂ ದಾಳಿ ನಡೆಸುತ್ತಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಡೆದುಕೊಂಡಿದ್ದ ಗೌರವ ಟೇಕ್ವಾಂಡೋ ಬ್ಲಾಕ್ ಬೆಲ್ಟ್ನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ಹಿಂಪಡೆದಿದೆ.
ವಿಜಯಕ್ಕಿಂತ ಶಾಂತಿ ಹೆಚ್ಚು ಅಮೂಲ್ಯವಾದುದು. ಮುಗ್ಧ ಜೀವಗಳ ಮೇಲಿನ ಕ್ರೂರ ದಾಳಿ ಇದಾಗಿದೆ. ಕ್ರೀಡೆಯ ಗೌರವ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಇದು ಉಲ್ಲಂಘಿಸಿದೆ ಎಂದು ಟೇಕ್ವಾಂಡೋ ಹೇಳಿದೆ.