ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾಕ್ ಮತ್ತು ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ISIS) ನ ನಾಯಕ, ಅಬು ಖದೀಜಾ ಎಂದು ಕರೆಯುವ ಅಬ್ದುಲ್ಲಾ ಮಕಿ ಮುಸ್ಲೆಹ್ ಅಲ್-ರಿಫಾಯಿ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಶುಕ್ರವಾರ ದೃಢಪಡಿಸಿದ್ದಾರೆ.
ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಎಂದು ಬಣ್ಣಿಸಲಾದ ಅಬು ಖದೀಜಾಯನ್ನು ಇರಾಕ್ ಭದ್ರತಾ ಪಡೆಗಳು ಅಮೆರಿಕ ನೇತೃತ್ವದ ಒಕ್ಕೂಟದ ಸಮನ್ವಯದೊಂದಿಗೆ ಹೊಡೆದುರುಳಿಸಿದೆ.
ಈ ಕಾರ್ಯಾಚರಣೆಯು ಉಗ್ರರ ವಿರುದ್ಧ ಇರಾಕ್ ನಡೆಸುತ್ತಿರುವ ಯುದ್ಧದಲ್ಲಿ ಮಹತ್ವದ ಗೆಲುವು ಎಂದು ಹೇಳಲಾಗುತ್ತಿದೆ.