ಶುದ್ಧ ಚಿನ್ನದಿಂದ ವಿಶ್ವದ ಅತ್ಯಂತ ಚಿಕ್ಕದಾದ ಗಣೇಶ : ಲಕ್ಷ್ಮಿದೇವಿ ಮೂರ್ತಿ ತಯಾರಿಸಿದ ವ್ಯಾಪಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : 

ಗುಜರಾತ್‌  ನಗರದ ಖುಶಾಲ್‌ಭಾಯ್ ಜ್ಯುವೆಲ್ಲರ್ಸ್ ಎಂಬ ಪ್ರಸಿದ್ಧ ಆಭರಣ ಮಳಿಗೆಯು, 22 ಕ್ಯಾರೆಟ್ ಶುದ್ಧ ಚಿನ್ನದಿಂದ ಮಾಡಿದ ವಿಶ್ವದ ಅತ್ಯಂತ ಚಿಕ್ಕದಾದ ಗಣೇಶ ಮತ್ತು ಲಕ್ಷ್ಮಿದೇವಿಯ ವಿಗ್ರಹಗಳನ್ನು ರಚಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ.

ಈ ವಿಗ್ರಹಗಳು ಕೇವಲ 1 ಇಂಚು ಎತ್ತರ ಮತ್ತು 10 ಗ್ರಾಂ ತೂಕವಿದ್ದು, ಅತ್ಯಾಧುನಿಕ 3D ಮುದ್ರಣ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ಇಷ್ಟು ಚಿಕ್ಕ ವಿಗ್ರಹಗಳಿದ್ದರೂ, ಅದರಲ್ಲಿ ‘ಶೂನ್ಯ ದೋಷ’ದ ಗುಣಮಟ್ಟವನ್ನು ಕಾಯ್ದುಕೊಂಡಿರುವುದು ಗಮನಾರ್ಹವಾಗಿದೆ.

10 ಅಡಿ ವಿಗ್ರಹದಲ್ಲಿ ಗಣೇಶನ ಮುಖ ಮತ್ತು ಅಲಂಕಾರಗಳಲ್ಲಿ ಕಂಡುಬರುವಂತಹ ಸ್ಪಷ್ಟತೆ ಈ 1 ಇಂಚಿನ ವಿಗ್ರಹದಲ್ಲೂ ಗೋಚರಿಸುತ್ತದೆ ಅನ್ನೋದು ವೈಶಿಷ್ಟ್ಯ.ಒಂದೊಂದು ಪ್ರತಿಮೆಯ ಬೆಲೆ 1.5 ಲಕ್ಷ ರೂ.ಆಗಿದ್ದು, ಬೇಡಿಕೆಗೆ ತಕ್ಕಂತೆ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಮಳಿಗೆ ಮಾಲೀಕ ವೀರೇನ್ ಚೋಕ್ಸಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!