Saturday, January 10, 2026

WPL 2026: ಗೆಲುವಿನ ಸಂಭ್ರಮದ ನಡುವೆ RCBಗೆ ಶಾಕ್! ತಂಡದಿಂದ ಪೂಜಾ ವಸ್ತ್ರಾಕರ್ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಸೀಸನ್ 4ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಆರಂಭ ಮಾಡಿದ್ದರೂ, ಆ ಗೆಲುವಿನ ಖುಷಿಯ ನಡುವೆ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಆರ್‌ಸಿಬಿಗೆ ಇದೀಗ ಪ್ರಮುಖ ಆಟಗಾರ್ತಿಯ ಗಾಯ ಕಳವಳ ತಂದಿದೆ.

ಆರ್‌ಸಿಬಿ ತಂಡದ ಸ್ಟಾರ್ ವೇಗಿ ಹಾಗೂ ಆಲ್‌ರೌಂಡರ್ ಪೂಜಾ ವಸ್ತ್ರಾಕರ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ವೈದ್ಯರ ಸಲಹೆಯಂತೆ ಕನಿಷ್ಠ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ. ಈ ಕಾರಣದಿಂದ ಅವರು ಮುಂದಿನ ಐದು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದು ತಂಡದ ಬೌಲಿಂಗ್ ದಾಳಿಗೆ ದೊಡ್ಡ ನಷ್ಟವೆನ್ನಲಾಗಿದೆ.

ಇದನ್ನೂ ಓದಿ: Kitchen Tips | ನಿಂಬೆಹಣ್ಣು ಬೇಗನೆ ಹಾಳಾಗುತ್ತಾ? ಹೆಚ್ಚು ದಿನ ತಾಜಾವಾಗಿಡಲು ಈ ಟಿಪ್ಸ್ ಫಾಲೋ ಮಾಡಿ

ಪೂಜಾ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯದ ಕಾರಣ, ಮುಂಬೈ ವಿರುದ್ಧ ಇಂಗ್ಲೆಂಡ್ ವೇಗಿ ಲಿನ್ಸೆ ಸ್ಮಿತ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಆ ಪಂದ್ಯದಲ್ಲಿ ಸ್ಮಿತ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಎರಡು ಓವರ್‌ಗಳಲ್ಲಿ 23 ರನ್ ನೀಡಿದ್ದು ದುಬಾರಿಯಾಯಿತು. ಆದರೂ ಪೂಜಾ ಅನುಪಸ್ಥಿತಿಯಲ್ಲಿ ಮುಂದಿನ ಪಂದ್ಯಗಳಲ್ಲೂ ಸ್ಮಿತ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ತಂಡ ಇದೀಗ ಸಂಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಸವಾಲು ಎದುರಿಸುತ್ತಿದ್ದು, ಪೂಜಾ ಮರಳುವವರೆಗೂ ಉಳಿದ ಬೌಲರ್‌ಗಳ ಮೇಲೆ ಹೆಚ್ಚಿನ ಹೊಣೆ ಬೀಳಲಿದೆ.

error: Content is protected !!