Monday, January 12, 2026
Monday, January 12, 2026
spot_img

WPL 2026 | ಟಾಸ್ ಗೆದ್ದ ಸ್ಮೃತಿ ಪಡೆ ಫೀಲ್ಡಿಂಗ್ ಆಯ್ಕೆ: ಯುಪಿ ವಾರಿಯರ್ಸ್‌ಗೆ ಗೆಲುವಿನ ಸವಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್ 2026ರ ಐದನೇ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ಮುಖಾಮುಖಿಯಾಗಿವೆ. ನವಿ ಮುಂಬೈನ ಮೈದಾನದಲ್ಲಿ ಇಂದು ನಡೆಯುತ್ತಿರುವ ಈ ಪಂದ್ಯದಲ್ಲಿ, ಅದೃಷ್ಟ RCB ಪರವಾಗಿದ್ದು, ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.

ಈಗಾಗಲೇ ಶುಭಾರಂಭ ಮಾಡಿರುವ ಬೆಂಗಳೂರು ತಂಡ ಸತತ ಎರಡನೇ ಜಯದ ನಿರೀಕ್ಷೆಯಲ್ಲಿದ್ದರೆ, ಇತ್ತ ಯುಪಿ ವಾರಿಯರ್ಸ್ ಈ ಪಂದ್ಯದ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸುವ ತವಕದಲ್ಲಿದೆ. ಸತತ ಎರಡನೇ ಬಾರಿಗೆ ಟಾಸ್ ಗೆದ್ದಿರುವ RCB, ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಯೋಜನೆ ಹಾಕಿಕೊಂಡಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!