ಹೊಸದಿಗಂತ ಡಿಜಿಟಲ್ ಡೆಸ್ಕ್:
ತವರಲ್ಲೇ ಆರ್ಸಿಬಿಗೆ ಸೋಲುಣಿಸಿದ ಮುಂಬೈ ತಂಡ. ಕೊನೆಯ ಒಂದು ಬಾಲ್ ಇರುವಾಗಲೇ ಮುಂಬೈ 4 ವಿಕೆಟ್ಗಳ ರೋಚಕ ಜಯ ಸಾಧಿಸಿದ್ದು, ಆರ್ಸಿಬಿ ಹ್ಯಾಟ್ರಿಕ್ ಕನಸು ಭಗ್ನವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಆರ್ಸಿಬಿ 20 ಓವರ್ಗಳಿಗೆ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಆರ್ಸಿಬಿ ನೀಡಿದ 168 ರನ್ಗಳ ಗುರಿ ಬೆನ್ನತ್ತಿದ ಮುಂಬೈ ಒಂದು ಬಾಲ್ ಬಾಕಿ ಇರುವಾಗ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿದೆ.
ಕೊನೇ ಓವರ್ ಮುಂಬೈ ಗೆಲುವಿಗೆ 6 ರನ್ ಬೇಕಿತ್ತು. ಈ ವೇಳೆ ಮೊದಲ 4 ಎಸೆತಗಳಲ್ಲಿ ಕ್ರಮವಾಗಿ ಒಂದೊಂದರಂತೆ 4 ರನ್ ಸೇರ್ಪಡೆಯಾಯಿತು. ಆದ್ರೆ ಇನ್ನೆರಡು ಎಸೆತಗಳಲ್ಲಿ 2 ರನ್ ಬೇಕಿದ್ದಾಗ ಕಮಲಿನಿ ಬೌಂಡರಿ ಹೊಡೆದು ಮುಂಬೈಗೆ ಗೆಲುವು ತಂದುಕೊಟ್ಟರು.