January16, 2026
Friday, January 16, 2026
spot_img

WPL: ಯುಪಿ ವಾರಿಯರ್ಸ್‌ಗೆ ಒಲಿದ ವಿಜಯಲಕ್ಷ್ಮಿ: ಮುಂಬೈಗೆ ಅಚ್ಚರಿಯ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿಯ ಎಂಟನೇ ಪಂದ್ಯದಲ್ಲಿ ದೊಡ್ಡ ತಿರುವು ಕಂಡುಬಂದಿದೆ. ಸತತ ಸೋಲುಗಳಿಂದ ಹಿನ್ನಡೆಯಲ್ಲಿದ್ದ ಯುಪಿ ವಾರಿಯರ್ಸ್ ತಂಡ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಏಕಪಕ್ಷೀಯ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಯುಪಿ ತಂಡ ಈ ಆವೃತ್ತಿಯಲ್ಲಿ ಮೊದಲ ಬಾರಿ ಸಂಭ್ರಮಿಸುವ ಅವಕಾಶ ಪಡೆದುಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತು. ನ್ಯಾಟ್ ಸಿವರ್-ಬ್ರಂಟ್ 65 ರನ್‌ಗಳ ಆಟ ತೋರಿದರೆ, ಅಮನ್‌ಜೋತ್ ಕೌರ್ 38 ರನ್ ಮತ್ತು ನಿಕೋಲಾ ಕ್ಯಾರಿ ಅಜೇಯ 32 ರನ್‌ಗಳ ಸಹಾಯ ನೀಡಿದರು. ಯುಪಿ ಪರ ಶಿಖಾ ಪಾಂಡೆ, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್ ಮತ್ತು ಆಶಾ ಸಬಾನಾ ತಲಾ ಒಂದು ವಿಕೆಟ್ ಪಡೆದು ಮುಂಬೈಯನ್ನು ನಿಯಂತ್ರಿಸಿದರು.

ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಆರಂಭದಿಂದಲೇ ಧೈರ್ಯಮಯ ಆಟ ಪ್ರದರ್ಶಿಸಿ 18.1 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ ಪಂದ್ಯ ಮುಗಿಸಿತು. ಹರ್ಲೀನ್ ಡಿಯೋಲ್ 39 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿ ಗೆಲುವಿನ ನಾಯಕಿಯಾಗಿದರು. 12 ಬೌಂಡರಿಗಳೊಂದಿಗೆ ಅವರ ಆಕ್ರಮಣಕಾರಿ ಇನ್ನಿಂಗ್ಸ್‌ವೇ ಪಂದ್ಯದ ದಿಕ್ಕು ಬದಲಿಸಿತು. ಕ್ಲೋಯ್ ಟ್ರಯಾನ್ 27 ರನ್ ಮತ್ತು ಫೋಬೆ ಲಿಚ್‌ಫೀಲ್ಡ್ 25 ರನ್‌ಗಳ ಸಹಕಾರ ನೀಡಿದರು.

Must Read

error: Content is protected !!