ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಹಿಂದಿ ಹೇರಿಕೆ ವಿಷಯ ಮುನ್ನಲೆಗೆ ಬಂದಿದ್ದು, ತಮಿಳುನಾಡಿದ ಸಿಎಂ ಎಂ.ಕೆ. ಸ್ಟ್ಯಾಲಿನ್‌ಗೆ ಪ್ರಧಾನಿ ಮೋದಿ ಟಾಂಗ್ ನೀಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಡಿಎಂಕೆ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪ ಮಾಡಿತ್ತು. ಈ ಆರೋಪಗಳಿಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡಿನಿಂದ ಹಲವು ರಾಜಕಾರಣಿಗಳು ತಮಗೆ ಪತ್ರ ಬರೆಯುತ್ತಾರೆ.
ಆ ಪತ್ರಗಳು ಸಂಪೂರ್ಣ ಇಂಗ್ಲೀಷ್ ನಲ್ಲಿಯೇ ಇರುತ್ತದೆ. ಕನಿಷ್ಠ ಪಕ್ಷ ಪತ್ರದ ಕೆಳಗೆ ಸಹಿಯನ್ನಾದರೂ ತಮಿಳಿನಲ್ಲಿ ಮಾಡುವುದಿಲ್ಲ. ಸಹಿಯನ್ನಾದರೂ ಇನ್ನು ಮುಂದೆ ತಮಿಳಿನಲ್ಲಿ ಮಾಡಿ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ತಮಿಳು ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಿ ಎಂದು ಸ್ಟಾಲಿನ್ ಸರ್ಕಾರಕ್ಕೆ ಮೋದಿ ಸವಾಲು ಹಾಕಿದ್ದಾರೆ.