ಚರ್ಮ ಕ್ಯಾನ್ಸರ್ ಗೆದ್ದ WWE ಸ್ಟಾರ್ ಜಾನ್ ಸೀನಾ: ಜನರಿಗೆ ಕೊಟ್ರು ಸಲಹೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

WWE ಸ್ಟಾರ್ ಹಾಗೂ ಹಾಲಿವುಡ್ ನಟ ಜಾನ್ ಸೀನಾ ಅವರು ಚರ್ಮ ಕ್ಯಾನ್ಸರ್ ಗೆ ತುತ್ತಾಗಿದ್ದು, ಇದರಿಂದಾದ ತಮ್ಮ ಜೀವನದಲ್ಲಿ ಉಂಟಾದ ಪರಿಣಾಮ ಮತ್ತು ಅನುಭವವನ್ನು ಅಭಿಮಾನಿಗಳೊಂದಿಗೆ ಮತ್ತು ಜನಸಾಮಾನ್ಯರೊಂದಿಗೆ ಹಂಚಿಕೊಂಡಿದ್ದಾರೆ.

ಅಮೆರಿಕದ ಫ್ಲೋರಿಡಾದಲ್ಲಿ ನಡೆದ ‘Today’ ಶೋನಲ್ಲಿ ಮಾತನಾಡಿದ ಅವರು, ಬಾಲ್ಯದಲ್ಲಿ ಸನ್‌ಸ್ಕ್ರೀನ್ ಬಳಕೆ ಮಾಡುವುದನ್ನು ನೋಡಿದರೆ ಅಪಹಾಸ್ಯ ಮಾಡುತ್ತಿದ್ದೆ. ಹೀಗಾಗಿ ನಾನು ಯಾವುದೇ ಸನ್‌ಸ್ಕ್ರೀನ್ ಲೋಷನ್ ಬಳಸದಿರುವ ಕಾರಣ ಚರ್ಮದ ಕ್ಯಾನ್ಸರ್‌ ಬಾಧಿಸಿತ್ತು ಎಂದು ತಿಳಿಸಿದ್ದಾರೆ. ಆದ್ದರಿಂದ ನಾನು ಚರ್ಮದ ಕ್ಯಾನ್ಸರ್‌ಗೆ ಒಳಗಾಗಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ಅನುಭವವಿದೆ’ ಎಂದು ಹೇಳಿದರು.

ಮೊದಲ ಬಾರಿಗೆ ಎದೆಯ ಭಾಗದಲ್ಲಿ ವಿಚಿತ್ರವಾದ ಕಲೆಯ ಗುರುತುಗಳು ಹಾಗೂ ಚರ್ಮ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡವು. ನಂತರ, ಚರ್ಮರೋಗ ತಜ್ಞರನ್ನು ಸಂಪರ್ಕಿಸಿದ್ದು, ಪರೀಕ್ಷೆಯನ್ನು ಮಾಡಿಸಿದಾಗ ಚರ್ಮ ಕ್ಯಾನ್ಸರ್ ಇರುವುದು ದೃಢಪಟ್ಟಿತು. ಇದಕ್ಕೆ ಧೃತಿಗೆಡದೇ ನಾನು ಅದಕ್ಕೆ ಚಿಕಿತ್ಸೆಯನ್ನು ಪಡೆದುಕೊಂಡೆನು. ಇದಾದ ನಂತರ ಇಂತಹದೇ ಚರ್ಮ ಕ್ಯಾನ್ಸರ್ ಉಲ್ಬಣದ ಪರಿಸ್ಥಿತಿ ಒಂದೇ ವರ್ಷದಲ್ಲಿ ಮರುಕಳಿಸಿತು. ಆಗ ನನ್ನ ಭುಜ ಭಾಗದಲ್ಲಿಯೂ ಕ್ಯಾನ್ಸರ್ ಇರುವ ಮಚ್ಚೆ ಕಂಡುಬಂದಿತು. ಆಗ ಎರಡೂ ಬಾರಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವ ಮೂಲಕ ನನಗೆ ಬಂದಿದ್ದ ಮಾರಣಾಂತಿಕ ರೋಗದ ಸಮಸ್ಯೆ ನಿವಾರಣೆಯಾಯಿತು ಎಂದು ಸೀನಾ ಹೇಳಿದರು.

ತಮ್ಮ ಜೀವನದಲ್ಲಿ ಅನುಭವಿಸಿದ ಚರ್ಮದ ಸಮಸ್ಯೆಯಿಂದಾಗಿ ಇದೀಗ ಜಾನ್ ಸೀನಾ ಈಗ ಚರ್ಮದ ಆರೋಗ್ಯ ಕುರಿತ ಜಾಗೃತಿಯ ರಾಯಭಾರಿಯಂತೆ ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದಾರೆ. ಎಲ್ಲರೂ ಪ್ರತಿದಿನ ಕನಿಷ್ಠ SPF 30 ಇರುವ ಸನ್‌ಸ್ಕ್ರೀನ್ ಬಳಸಿ, ಬಟ್ಟೆಯಿಂದ ಮುಚ್ಚಲಾಗದ ತ್ವಚೆಯ ಎಲ್ಲ ಭಾಗಗಳಿಗೆ ಸಮರ್ಪಕವಾಗಿ ಹಚ್ಚಬೇಕು ಎಂದು ಅವರು ಸಲಹೆ ನೀಡುತ್ತಾರೆ. ಮುಖ್ಯವಾಗಿ ಸೂರ್ಯನಿಗೆ ಒಡ್ಡಿಕೊಳ್ಳುವ ದೇಹದ ಭಾಗಗಳಾದ ‘ಕಿವಿ, ಕೆಳ ಕತ್ತು (ಕುತ್ತಿಗೆ), ಕೈಗಳ ಹಿಂದೆ ಸೇರಿ ಇತರೆಡೆ ಸನ್‌ ಸ್ಕ್ರೀನ್ ಹಚ್ಚಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಜಕರ್ಣ, ತುರಿಕೆ, ಬ್ಲಾಕ್ ಸ್ಪಾಟ್, ಕ್ಯಾನ್ಸರ್ ಮೊದಲಾದ ಸಮಸ್ಯೆಗಳು ಬರುತ್ತವೆ. ಹೀಗಾಗಿ, ಸನ್‌ಸ್ಕ್ರೀನ್ ಬಳಕೆ ಮಾಡಬೇಕು ಎಂದು ಸೀನಾ ತನ್ನ ಅನುಭವದ ಆಧಾರದ ಮೇಲೆ ಜನರಿಗೆ ಚರ್ಮವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಯಾವುದೇ ಚರ್ಮದ ಕಲೆಗಳು ಕಂಡುಬಂದರೂ ಅದನ್ನು ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!