ಭಾರತದಲ್ಲಿ ಹಣಕಾಸು ಸೇವೆಯನ್ನು ಸ್ಥಗಿತಗೊಳಿಸಿದ ಶಿಯೋಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸಿದ್ಧ ಜಾಗತಿಕ ಮೊಬೈಲ್‌ ಮತ್ತು ಟಕ್ನಾಲಜಿ ಬ್ರಾಂಡ್‌ ಶಿಯೋಮಿಯು ಭಾರತದಲ್ಲಿ ತನ್ನ ಹಣಕಾಸು ಸೇವೆಗಳನ್ನು ನಿಲ್ಲಿಸಿರುವುದಾಗಿ ಹೇಳಿದೆ. ತನ್ನ ಕಾರ್ಯತಂತ್ರದ ಮೌಲ್ಯಮಾಪನ ಚಟುವಟಿಕೆಯ ಭಾಗವಾಗಿ Mi Pay ಅನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದು ದೇಶದಲ್ಲಿ ಪ್ರಮುಖ ವ್ಯಾಪಾರ ಸೇವೆಗಳ ಮೇಲೆ ಹೆಚ್ಚು ಗಮನಹರಿಸುವುದಾಗಿ ಹೇಳಿದೆ.

ಕಂಪನಿಯು 2019 ರಲ್ಲಿ ದೇಶದಲ್ಲಿ Mi Pay ಅನ್ನು ಪ್ರಾರಂಭಿಸಿದ್ದು 20 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಗಳಿಸಿತ್ತು. ಹೆಚ್ಚಿದ ಜನಪ್ರಿಯತೆಯಿಂದಾಗಿ Mi ಕ್ರೆಡಿಟ್ ಅನ್ನು ಸಹ ಪ್ರಾರಂಭಿಸಿತು. ಆದರೀಗ ಈ ಸೇವೆಗಳನ್ನು ಮುಚ್ಚಿರುವುದಾಗಿ ಕಂಪನಿ ಹೇಳಿದೆ. ಮುಂದಿನ ದಿನಗಳಲ್ಲಿ ಮುಖ ವ್ಯಾಪಾರ ಸೇವೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀ ಕರಿಸುವುದಾಗಿ ಕಂಪನಿ ಹೇಳಿದೆ.

“ನಾವು ಮಾರ್ಚ್ 2022 ರಲ್ಲಿ Mi ಫೈನಾನ್ಶಿಯಲ್ ಸೇವೆಗಳನ್ನು ಮುಚ್ಚಿದ್ದೇವೆ. ನಾಲ್ಕು ವರ್ಷಗಳ ಅಲ್ಪಾವಧಿಯಲ್ಲಿ, ಸಾವಿರಾರು ಗ್ರಾಹಕರನ್ನು ಸಂಪರ್ಕಿಸಲು ಮತ್ತು ಬೆಂಬಲಿಸಲು ನಮಗೆ ಸಾಧ್ಯವಾಯಿತು. ನಾವು ನಮ್ಮ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಈ ಪ್ರಕ್ರಿಯೆಯಲ್ಲಿ ನಮ್ಮ ಗ್ರಾಹಕರನ್ನು ಬೆಂಬಲಿಸುತ್ತಿದ್ದೇವೆ” ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಆತ್ಯಾಧುನಿಕ ತಂತ್ರಜ್ಞಾನಗಳನ್ನು ಗ್ರಾಹಕರಿಗೆ ನೀಡುವುದನ್ನು ಕಂಪನಿ ಮುಂದುವರೆಸುತ್ತದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!