ಹೊಸದಿಗಂತ ವರದಿ ಯಾದಗಿರಿ:
ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮುಂದೆ ನಡೆದ ಕಾಲ್ತುಳಿತ ಘಟನೆಯಲ್ಲಿ ಯಾದಗಿರಿ ಮೂಲಕ ಶಿವಲಿಂಗ ಮೃತಪಟ್ಟಿದ್ದಾರೆ.
ಯಾದಗಿರಿ ತಾಲೂಕಿನ ಹೋನಗೇರಾ ಗ್ರಾಮದ ನಿವಾಸಿ ಶಿವಲಿಂಗ ಬೆಂಗಳೂರಿನಲ್ಲಿಯೇ ವಾಸವಾಗಿದ್ದ. ಸಾವಿನ ಸುದ್ದಿ ತಿಳಿದು ಹೊನಗೇರಾ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಮೊಮ್ಮಗನನ್ನು ಕಳೆದುಕೊಂಡಿದ ಅಜ್ಜಿ ಮರೇಮ್ಮ ಕಣ್ಣೀರು ಹಾಕುತ್ತಿದ್ದಾರೆ. ಚಂದಪ್ಪ ಮತ್ತು ತಿಮ್ಮಮ್ಮ ದಂಪತಿಯ ಮಗನಾಗಿದ್ದು, ತಂದೆ ತಾಯಿ ಬೆಂಗಳೂರಿಗೆ ಕಣ್ಣೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿಯೇ ನನ್ನ ಜೊತೆ ವಾಸ ಮಾಡು. ಓದಿ ನೌಕರಿ ಮಾಡುತ್ತೇನೆ ಎಂದಿದ್ದ.ಈಗ ಆತ ಹೊರಟು ಹೋದ .ಈಗ ಮೊಮ್ಮಗ ಶಿವಲಿಂಗ ಇಲ್ಲ ನನಗೆ ಸಹಾಯ ಮಾಡುವವರು ಯಾರು ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಗ್ರಾಮದಲ್ಲಿ ಸ್ಮಶಾನ ಇಲ್ಲದಿಂದ ಸೋದರ ಮಾವನ ಊರಾದ ಆಶನಾಳ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ. ಹೊನಗೇರಾದ ಮನೆ ಎದುರು ಯುವಕನ ಅಂತ್ಯಕ್ರಿಯೆಗೆ ಮುಂದಾಗಿದ್ದ ಶಿವಲಿಂಗ ಕುಟುಂಬಸ್ಥರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೃತ ಶಿವಲಿಂಗನ ಸೋದರ ಮಾವನ ಊರು ಆಶನಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸರ್ಕಾರ ಗ್ರಾಮದಲ್ಲಿ ಸ್ಮಶಾನ ಜಾಗ ಗುರುತಿಸದಕ್ಕೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.