September 23, 2026
Wednesday, September 23, 2026
spot_img

ಯಾದಗಿರಿ: ಚಿಕಿತ್ಸೆ ವೇಳೆ ಹಲ್ಲಿನೊಳಗೆ ಸೂಜಿ ಬಿಟ್ಟು ನಿರ್ಲಕ್ಷ್ಯ; ಖಾಸಗಿ ವೈದ್ಯನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಹೊಸದಿಗಂತ ವರದಿ ಯಾದಗಿರಿ:

ಹಲ್ಲಿನ ನೋವು ತಾಳದೆ ಚಿಕಿತ್ಸೆಗೆ ಹೋದ ಮಹಿಳೆಗೆ ವೈದ್ಯನೊಬ್ಬ ಚುಚ್ಚುಮದ್ದು ನೀಡಿ ಹಲ್ಲಿನಲ್ಲೇ ಸೂಜಿಬಿಟ್ಟ ಘಟನೆ ಯಾದಗಿರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಚಿಕಿತ್ಸೆ ವೇಳೆ ಹಲ್ಲಿನೊಳಗೆ ಸೂಜಿ ಉಳಿಸುವ ಮೂಲಕ ತಮ್ಮ ಜೀವಕ್ಕೆ ಹಾನಿ ಉಂಟು ಮಾಡಿರುವ ಶಹಾಪುರ ನಗರದ ಖಾಸಗಿ ವೈದ್ಯನ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕೆಂದು ಚಂದ್ರಕಲಾ ನಿಂಗಪ್ಪ ಬಾಗ್ಲಿ ಎಂಬುವರು ತಮ್ಮ ಕುಟುಂಬಸ್ಥರೊಂದಿಗೆ ಶುಕ್ರವಾರ ನಗರದ ಡಿಎಚ್‌ಒ ಕಚೇರಿ ಮುಂದೇ ಕೆಲಹೊತ್ತು ಧರಣಿ ನಡೆಸಿ ಒತ್ತಾಯಿಸಿದರು.

ಇದನ್ನೂ ಓದಿ:

ಕಳೆದ ಮೇ.5ರಂದು ಈ ವೈದ್ಯರ ಹತ್ತಿರ ಹಲ್ಲು ನೋವಿನ ಚಿಕಿತ್ಸೆಗೆ ಹೋದಾಗ ಅವರಿಂದ ಈ ಎಡವಟ್ಟು ನಡೆದಿದೆ. ಹಲ್ಲು ನೋವು ಜಾಸ್ತಿಯಾದಾಗ ಇಲ್ಲಿನ ಡಾ. ಬೆಳ್ಳಿ ಎಂಬುವವರ ಹತ್ತಿರ ತೋರಿಸಿದಾಗ ಅವರು ಎಕ್ಷ್-ರೇ ಮಾಡಿದಾಗ ಸೂಜಿ ಇರುವುದಾಗಿ ಹೇಳಿದ್ದಾರೆ. ಇದನ್ನೇ ಚಿಕಿತ್ಸೆ ನೀಡಿದ ವೈದ್ಯರಿಗೆ ಕೇಳಿದಾಗ ಅವರು ಈ ಬಗ್ಗೆ ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ. ಈ ನಡುವೆ ನನಗೆ ಹಲ್ಲು ನೋವು ಜಾಸ್ತಿಯಾಗಿ ಊಟ ಮಾಡಲು ಸಹ ಆಗುತ್ತಿಲ್ಲ. ಇದರಿಂದ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ನೀಡುವಂತೆ ಡಿಎಚ್ ಒ ಕಚೇರಿ ಮುಂದೆ ಕೆಲಹೊತ್ತು ಧರಣಿ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !