ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ರಾಜ ವಂಶಸ್ಥ ಯದುವೀರ್ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರಾ ಎನ್ನುವ ಪ್ರಶ್ನೆಗೆ ಯದುವೀರ್ ಉತ್ತರಿಸಿದ್ದು, ನನಗೆ ರಾಜಕೀಯದಲ್ಲಿ ಆಸಕ್ತಿಯೇ ಇಲ್ಲ ಎಂದಿದ್ದಾರೆ.
ಈಗಲ್ಲಾ, ಭವಿಷ್ಯದಲ್ಲಿಯೂ ರಾಜಕೀಯಕ್ಕೆ ಬರೋದಿಲ್ಲ. ಚುನಾವಣೆ ಹತ್ತಿರ ಬಂದಾಗಲೆಲ್ಲಾ ನಾನು ರಾಜಕೀಯಕ್ಕೆ ಬರ‍್ತೀನಾ ಅನ್ನೋ ಚರ್ಚೆ ಆಗುತ್ತದೆ. ಅದರ ಬಗ್ಗೆ ನನಗೆ ಗಮನ ಇಲ್ಲ. ಧಾರ್ಮಿಕ ಕಾರ್ಯಕ್ರಮಗಳನ್ನು ಪಾಲ್ಗೊಳ್ಳುತ್ತೇನೆಷ್ಟೆ. ರಾಜಕೀಯ ನನಗೆ ಬೇಡ ಎಂದಿದ್ದಾರೆ.