Saturday, December 6, 2025

ಭೂಮಿಗೆ ಹೊರೆಯಾದವರಿಗೆ ಯಮರಾಜ ಕಾಯುತ್ತಿರುತ್ತಾನೆ: ದುಷ್ಕರ್ಮಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ಸಿಎಂ ಯೋಗಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೆಣ್ಣುಮಕ್ಕಳ ತಂಟೆಗೆ ಬಂದರೆ ತಮ್ಮ ಸರ್ಕಾರ ಸಹಿಸುವುದಿಲ್ಲ.. ಮಗಳ ಸುರಕ್ಷತೆಯೊಂದಿಗೆ ಆಟವಾಡಿದರೆ, ಯಮರಾಜ ನಿಮಗಾಗಿ ಕಾಯುತ್ತಿರುತ್ತಾನೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಅಪರಾಧ ಮತ್ತು ಅಪರಾಧಿಗಳಿಗೆ ಜಾಗವಿಲ್ಲ. ಹೆಣ್ಣುಮಕ್ಕಳ ಸುರಕ್ಷತೆಯನ್ನು ಹಾಳುಮಾಡುವ ಯಾರನ್ನಾದರೂ ನಿರ್ಮೂಲನೆ ಮಾಡಲಾಗುತ್ತದೆ’ ಎಂದು ಸರ್ಕಾರದ ಎನ್ ಕೌಂಟರ್ ಬಗ್ಗೆ ಸಮರ್ಥಿಸಿಕೊಂಡರು.

ವ್ಯವಸ್ಥೆಯ ಮೇಲೆ ಹೊರೆಯಾಗಿರುವವರನ್ನು ಭೂಮಿಯನ್ನು ಮುಕ್ತಗೊಳಿಸಬೇಕು. ಅವರ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದ ಅವರು, ಭೂಮಿಗೆ ಹೊರೆಯಾದವರಿಗೆ ಯಮರಾಜ ಕಾಯುತ್ತಿರುತ್ತಾನೆ ಎಂದು ದುಷ್ಕರ್ಮಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಸರ್ಕಾರ ಮನೆ ಖರೀದಿದಾರರಿಗೆ ಹೇಗೆ ಸಹಾಯ ಮಾಡುತ್ತಿದೆ ಮತ್ತು ಮುಂದಿನ ಅಭಿವೃದ್ಧಿ ದೃಷ್ಟಿಕೋನ ಹೇಗಿದೆ ಎನ್ನುವ ಕುರಿತು ವಿವರಿಸಿದರು.

ಇಂಡಿಗೋ ಗ್ರಾಹಕರಿಗೆ ನಾಳೆಯೊಳಗೆ ಹಣ ರಿಫಂಡ್‌ ಮಾಡುವಂತೆ ಕೇಂದ್ರದ ಸೂಚನೆ; ಬೆಲೆ ಹೆಚ್ಚಳ ಮಾಡದಂತೆ ಇತರ ಏರ್‌ಲೈನ್ಸ್‌ಗೆ ಎಚ್ಚರಿಕೆ

ತಾವು ಮುಖ್ಯಮಂತ್ರಿಯಾದ ಮೇಲೆ ನಡೆದಿರುವ ಅಭಿವೃದ್ಧಿ ಕಾರ್ಯಗಳಲ್ಲಿ ರಾಮ ಮಂದಿರದ ಶಿಲಾನ್ಯಾಸ, ಅದರ ನಿರ್ಮಾಣ ಮತ್ತು ದೇವಾಲಯದಲ್ಲಿ ಧರ್ಮ ಧ್ವಜ ಸ್ಥಾಪನೆ ಅತ್ಯಂತ ಅಭೂತಪೂರ್ವ ಕ್ಷಣಗಳು ಎಂದು ಅವರು ಹೇಳಿದರು.

500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗಿದೆ. ಧರ್ಮ ಧ್ವಜವನ್ನೂ ಹರಿಸಲಾಗಿದೆ. ಇದರಲ್ಲಿ ನನ್ನ ಹಿಂದಿನ ಮೂರು ತಲೆಮಾರುಗಳ ಹೋರಾಟವಿದೆ. ಆದರೆ ಪರಂಪರೆ, ದೇಶ ಮತ್ತು ಧರ್ಮದ ಕಡೆಗೆ ಕರ್ತವ್ಯವನ್ನು ಮಾಡುವ ಅವಕಾಶ ನನಗೆ ಸಿಕ್ಕಿದೆ ಎಂದರು.

ಪ್ರತಿಯೊಂದು ಸಮಾಜವು ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು ಎಂದ ಅವರು, ದೇಶದ ಅಭಿವೃದ್ಧಿಗಾಗಿ, ಭವಿಷ್ಯದ ಪೀಳಿಗೆಗೆ ಹೊಸ ಉದಾಹರಣೆಯನ್ನು ಪ್ರಸ್ತುತಪಡಿಸಲು ರಾಮ ಜನ್ಮಭೂಮಿ ಅಭಿಯಾನ ಅಗತ್ಯವಾಗಿತ್ತು ಎಂದು ಯೋಗಿ ಹೇಳಿದರು.

error: Content is protected !!