August 31, 2026
Monday, August 31, 2026
spot_img

ಶ್ರೀನಗರದಲ್ಲಿ ನದಿಗೆ ಉರುಳಿದ ಸೇನಾ ವಾಹನ: 9 ಮಂದಿ ಸಿಆರ್​​ಪಿಎಫ್​ ಸಿಬ್ಬಂದಿಗೆ ಗಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶ್ರೀನಗರ ಹೊರವಲಯದ ಅಹ್ಮದ್‌ನಗರ ಪ್ರದೇಶದ ಡಾಗ್ಪೋರಾ-ಉಮರ್ಹೇರ್ ರಸ್ತೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ವಾಹನ ನದಿಗೆ ಬಿದ್ದು, 9 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಬಳಿಕ ವಾಹನ ನದಿಗೆ ಬಿದ್ದಿದೆ. ಗಾಯಗೊಂಡಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ಸೌರಾದ ಸ್ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !