ಹೊಡಸದಿಗಂತ ಡಿಜಿಟಲ್ ಡೆಸ್ಕ್:
ಐಷಾರಾಮಿ ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ಮಧ್ಯರಾತ್ರಿ ಅಂಗಡಿಯ ಮುಂದೆ ಇರಿಸಿದ ಹೂವಿನ ಗಿಡವನ್ನು ಕದ್ದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಮಹಿಳೆ ಹೂವಿನ ಕದ್ದು ಪರಾರಿಯಾಗಿರುವುದು ಅಂಗಡಿಯ ಮುಂದೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಮರೂನ್ ಬಣ್ಣದ ಬಿಎಂಡಬ್ಲ್ಯು ಕಾರಿನಲ್ಲಿ ಬಂದು ಅಂಗಡಿಯ ಮುಂದೆ ಅಲಂಕಾರಕ್ಕಾಗಿ ಇಟ್ಟಿದ್ದ ಹೂವಿನ ಗಿಡವನ್ನು ಕದ್ದೊಯ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮಹಿಳೆಯ ವರ್ತನೆಯಿಂದ ಇಂಟರ್ನೆಟ್ ಬಳಕೆದಾರರೂ ಆಘಾತಕ್ಕೊಳಗಾಗಿದ್ದು, ಆಕೆಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆಕೆಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
नोएडा, यूपी में एक मोहतरमा रात के 12 बजे BMW कार से उतरी। सड़क किनारे रखा गमला उठाकर ले गईं।@Jyoti_karki_ pic.twitter.com/RI9WMWjAvJ
— Sachin Gupta (@SachinGuptaUP) October 27, 2024