ದೀಪಾವಳಿ ಉಡುಗೊರೆಯಾಗಿ “ಯಶೋದಾ” ಟ್ರೈಲರ್ ಬಿಡುಗಡೆ ದಿನಾಂಕ ತಿಳಿಸಿದ ಸಮಂತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ʻಯಶೋದಾʼ ನಾಯಕಿ ಪ್ರಧಾನ ಸಿನಿಮಾದಲ್ಲಿ ಸಮಂತಾ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟೀಸರ್ ನಲ್ಲಿ ಸಮಂತಾ ಅವರ ಸಾಹಸ ದೃಶ್ಯಗಳು ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ಈ ವೈಜ್ಞಾನಿಕ ಥ್ರಿಲ್ಲರ್‌ನಲ್ಲಿ ಸಮಂತಾ ಗರ್ಭಿಣಿ ಮಹಿಳೆಯ ಪಾತ್ರವನ್ನು ಮಾಡುತ್ತಿದ್ದು, ತಮಿಳು ನಿರ್ದೇಶಕರಾದ ಹರಿ-ಹರನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಚಿತ್ರ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ. ಸಮಂತಾ ತಮ್ಮ ಅಭಿಮಾನಿಗಳಿಗೆ ದೀಪಾವಳಿ ಉಡುಗೊರೆಯಾಗಿ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ತಿಳಿಸಿದರು.
ಚಿತ್ರದ ಟ್ರೇಲರ್ ಅಕ್ಟೋಬರ್ 27 ರಂದು 5:36 ನಿಮಿಷಕ್ಕೆ ಬಿಡುಗಡೆಯಾಗಲಿದ್ದು, ಇಂದು ಸಣ್ಣ ವಿಡಿಯೋ ಗ್ಲಿಂಪ್ಸ್ ಬಿಡುಗಡೆಯಾಗಿದೆ.

ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್ ಕುಮಾರ್, ರಾವ್ ರಮೇಶ್, ಮುರಳಿ ಶರ್ಮಾ ಮತ್ತು ಸಂಪತ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರವು ನವೆಂಬರ್ 11 ರಂದು ತೆರೆಗೆ ಬರಲಿದೆ. ಮೆಲೋಡಿ ಬ್ರಹ್ಮ ಮಣಿಶರ್ಮ ಸಂಗೀತ ನೀಡುತ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಚಿತ್ರದಲ್ಲಿ ಸಮಂತಾ ಖುಷಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!