March 6, 2026
Friday, March 6, 2026
spot_img

ಯಶ್ ಸಿನಿಮಾಗೆ ‘ಧರ್ಮ’ ಸಂಕಟ: ಮಹಿಳಾ ಸಂಘಟನೆಗಳ ಬೆನ್ನಲ್ಲೇ ಈಗ ಕ್ರೈಸ್ತ ಒಕ್ಕೂಟ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಬಿಡುಗಡೆಗೂ ಮುನ್ನವೇ ಸುದ್ದಿಗಿಂತ ವಿವಾದಗಳ ಮೂಲಕವೇ ಸದ್ದು ಮಾಡುತ್ತಿದೆ. ಟೀಸರ್ ಬಿಡುಗಡೆಯಾದ ದಿನದಿಂದಲೂ ಒಂದಲ್ಲ ಒಂದು ಸಂಕಷ್ಟಗಳು ಚಿತ್ರತಂಡವನ್ನು ಬೆನ್ನತ್ತಿವೆ. ಮೊನ್ನೆಯಷ್ಟೇ ಮಹಿಳಾ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಈ ಚಿತ್ರಕ್ಕೆ, ಈಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ.

ಚಿತ್ರದ ಕೆಲವು ದೃಶ್ಯಗಳಲ್ಲಿ ಕ್ರೈಸ್ತ ಧರ್ಮದ ದೇವದೂತ ಸಂತ ಮಿಕಯೇಲ್ ಅವರಿಗೆ ಅಪಮಾನ ಮಾಡಲಾಗಿದೆ ಎಂಬುದು ಒಕ್ಕೂಟದ ಪ್ರಬಲ ಆರೋಪ. “ದೇವದೂತರ ಪ್ರತಿಮೆಯ ಮುಂದೆ ಅಶ್ಲೀಲವಾಗಿ ಚಿತ್ರೀಕರಣ ಮಾಡುವ ಮೂಲಕ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ” ಎಂದು ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಕ್ಕೂಟದ ಪ್ರಮುಖ ಬೇಡಿಕೆಗಳು:

ಯೂಟ್ಯೂಬ್‌ನಲ್ಲಿರುವ ವಿವಾದಿತ ದೃಶ್ಯಗಳನ್ನು ಕೂಡಲೇ ತೆಗೆದುಹಾಕಬೇಕು. ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕಾಗಿ ಚಿತ್ರತಂಡ ಬಹಿರಂಗವಾಗಿ ಕ್ಷಮೆಯಾಚಿಸಬೇಕು.

ಇದನ್ನೂ ಓದಿ:

ಈ ಸಂಬಂಧ ಚಲನಚಿತ್ರ ವಾಣಿಜ್ಯ ಮಂಡಳಿ, ಗೃಹ ಸಚಿವರು ಮತ್ತು ಸೆನ್ಸಾರ್ ಮಂಡಳಿಗೆ ಈಗಾಗಲೇ ದೂರು ಸಲ್ಲಿಕೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !