ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಾಯಣ ಚಿತ್ರಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಸಖತ್ ಸದ್ದು ಮಾಡುತ್ತಿದೆ. ಅದುವೇ, ಯಶ್ ನಿರ್ವಹಿಸುತ್ತಿರುವ ರಾವಣ ಪಾತ್ರದ ಸ್ಕ್ರೀನ್ ಟೈಮ್.
ಯಶ್ ಪಾತ್ರದ ರನ್‌ಟೈಮ್ ಎಷ್ಟು? ಈ ಚಿತ್ರದಲ್ಲಿ ಯಶ್ ಅವರ ರಾವಣ ಪಾತ್ರ ಕೇವಲ 15 ನಿಮಿಷಗಳಿರಲಿವೆ ಎಂದು ವರದಿಗಳು ಸೂಚಿಸಿವೆ. ಈ ಚಿತ್ರ 2 ಭಾಗಗಳಲ್ಲಿ ಮೂಡಿ ಬರುತ್ತಿದೆ. ಭಾಗ-1ರಲ್ಲಿ, ಭಗವಾನ್ ಶ್ರೀರಾಮನ ವನವಾಸಕ್ಕೂ ಮುಂಚಿನ ಜೀವನದ ಮೇಲೆ ಹೆಚ್ಚು ಗಮನಹರಿಸಲು ತಯಾರಕರು ಬಯಸಿದ್ದಾರೆ. ಹಾಗಾಗಿ, ರಾವಣನ ಪಾತ್ರ ಇಲ್ಲಿ ಕಡಿಮೆ.
ರಾಮ ಅಯೋಧ್ಯೆಯಿಂದ ವನವಾಸಕ್ಕೆ ತೆರಳುತ್ತಾನೆ. ಹಾಗಾಗಿ, ಚಿತ್ರದ ಮೊದಲ ಭಾಗದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಪ್ರಮುಖ ಪಾತ್ರಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ರಾಮನ ಬಾಲ್ಯ, ಶಿಕ್ಷಣ, ಮದುವೆ, ಪಟ್ಟಾಭಿಷೇಕ ಮತ್ತು ವನವಾಸಕ್ಕೆ ತೆರಳುವ ದೃಶ್ಯಗಳನ್ನು ತೋರಿಸುವ ಸಾಧ್ಯತೆ ಇದೆ. ಹಾಗಾಗಿ, ಮೊದಲ ಭಾಗದಲ್ಲಿ ಯಶ್ ಅವರ ಪಾತ್ರದ ರನ್ ಟೈಮ್ ಕಡಿಮೆ ಇರಲಿದೆ. ಪಾರ್ಟ್ ಎರಡರಲ್ಲಿ ಯಶ್ ಅವರ ಸ್ಕ್ರೀನ್ ಟೈಮ್ ಹೆಚ್ಚು ಇರಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.