Monday, December 22, 2025

ಯಶ್ ನಟನೆಯ`ಟಾಕ್ಸಿಕ್’ ಸಿನಿಮಾ ಅಬ್ಬರ: ಹೇಗಿದೆ ನೋಡಿ ನಟಿ ಕಿಯಾರಾ ಫಸ್ಟ್‌ ಲುಕ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಶ್ ನಟನೆಯ ಬಹುನಿರೀಕ್ಷಿತ `ಟಾಕ್ಸಿಕ್’ (Toxic) ಚಿತ್ರದ ನಾಯಕಿಯ ಫಸ್ಟ್‌ ಲುಕ್‌ ರಿಲೀಸ್ ಆಗಿದೆ.ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ನಾಡಿಯ ಪಾತ್ರದಲ್ಲಿ ಕಾಣಿಸ್ಕೊಂಡಿರುವ ಲುಕ್‌ನ್ನ ಚಿತ್ರತಂಡ ರಿಲೀಸ್ ಮಾಡಿದೆ.

ಇದುವರೆಗೂ ಚಿತ್ರದ ನಾಯಕಿಯ ಕುರಿತು ಟಾಕ್ಸಿಕ್ ತಂಡ ಅಧಿಕೃತ ಘೋಷಣೆ ಮಾಡಿರಲಿಲ್ಲ. ಇದೀಗ ಗ್ಲ್ಯಾಮರಸ್‌ ಲುಕ್‌ನಲ್ಲಿ ನಾಯಕಿಯನ್ನ ಪರಿಚಯಿಸಲಾಗಿದೆ.

`ಟಾಕ್ಸಿಕ್’ ಚಿತ್ರದಲ್ಲಿ ಐವರು ನಾಯಕಿಯರಿದ್ದು, ಕಿಯಾರಾ ಅಡ್ವಾನಿ ಕೂಡ ಒಬ್ಬರು. ಕಿಯಾರಾ ಜೊತೆ ನಯನತಾರಾ, ತಾರಾ ಸುತಾರಿಯಾ , ಹುಮಾ ಖುರೇಶಿ, ರುಕ್ಮಿಣಿ ವಸಂತ್ ನಟಿಸಿದ್ದಾರೆ. ಇದೀಗ ಯಶ್‌ಗೆ ನಾಯಕಿಯಾಗಿರುವ ಕಿರಯಾರಾ ಅಡ್ವಾನಿಯವರ ಜಬರ್ದಸ್ತ್ ಲುಕ್ ರಿವೀಲ್ ಆಗಿದೆ. ಹಾಲಿವುಡ್ ಹೀರೋಯಿನ್ ಲುಕ್‌ನಲ್ಲಿ ಕಿಯಾರಾ ಕಂಗೊಳಿಸಿದ್ದಾರೆ.

ಮುಂದಿನ ವರ್ಷದ ಮಾರ್ಚ್ 19ಕ್ಕೆ ಟಾಕ್ಸಿಕ್ ರಿಲೀಸ್‌ಗೆ ಸಿದ್ಧವಿದೆ.

error: Content is protected !!