ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ವಿಜಯಪುರ ನಗರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸಿದ್ದಾರೆ.
ವಿಜಯಪುರದ ಪ್ರಸಿದ್ಧ ಸಿದ್ದೇಶ್ವರ ದೇವಸ್ಥಾನದಲ್ಲಿ ಯತ್ನಾಳ್ ಹಾಗೂ ಕುಟುಂಬ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.
ಪ್ರತಿ ವರ್ಷ ಯುಗಾದಿ ಪಾಡ್ಯಾದಂದು ನಡೆಸುವ ಹೋಮ ಹವನ ಪೂಜೆ ಕಾರ್ಯಗಳಲ್ಲಿ ಭಾಗಿ ಆಗಿದ್ದಾರೆ. ಪೂಜೆಯ ಬಳಿಕ ಸಿದ್ದೇಶ್ವರ ಸಂಸ್ಥೆಯಿಂದ ನಿರ್ಮಿಸಿರೋ ದಾಸೋಹ ನಿಲಯ ಹಾಗೂ ಕಟ್ಟಡ ಉದ್ಘಾಟನೆ ಪೂಜಾ ಕಾರ್ಯದಲ್ಲಿ ಕೂಡ ಯತ್ನಾಳ್ ಭಾಗಿಯಾಗಲಿದ್ದಾರೆ.