ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ಮಾಡಬೇಕು: ರೇಣುಕಾಚಾರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್ ಏಜೆಂಟ್ ರೀತಿ ಬಸನಗೌಡ ಪಾಟೀಲ್ ಯತ್ನಾಳ್  ಮತನಾಡಿದ್ದು ಬಿಜೆಪಿ ಸೋಲಿಗೆ ಕಾರಣಯಿತು. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಮಾಜಿ ಶಾಸಕ ರೇಣುಕಾಚಾರ್ಯ ಒತ್ತಾಯಿಸಿದರು.

3 ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಇದು ಮುಂದಿನ ಚುನಾವಣೆಗೆ ಜನಾದೇಶವಲ್ಲ. ಹಣ ಬಲ, ಅಧಿಕಾರದ ಬಲದಿಂದ ಕಾಂಗ್ರೆಸ್ ಗೆದ್ದಿದೆ. ಲೋಕಸಭೆ ಚುನಾವಣೆಯಲ್ಲಿ 19 ಸ್ಥಾನ ಗೆದ್ವಿ. ಯಾಕೆ ಕಾಂಗ್ರೆಸ್ ಗೆಲ್ಲಲು ಆಗಲಿಲ್ಲ? ಇದು ಮಾನದಂಡವಲ್ಲ. ಕಾರ್ಯಕರ್ತರು, ಮುಖಂಡರಿಗೆ ಆತ್ಮವಿಶ್ವಾಸ ತುಂಬಬೇಕು. ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಮಾಡುತ್ತೇವೆ. ನೇರವಾಗಿ ಅನಗತ್ಯವಾಗಿ ಬಿಜೆಪಿಯಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಅಂತ್ಯ ಆಗಬೇಕು.

ಯಡಿಯೂರಪ್ಪ ಅವರು ಪ್ರವಾಸ ಮಾಡಿ ಪಕ್ಷ ಕಟ್ಟಿದ್ರು. ಯಡಿಯೂರಪ್ಪ, ಅನಂತ್ ಕುಮಾರ್, ಬಿಬಿ ಶಿವಪ್ಪ ಸೇರಿ ಅನೇಕರು ಪಕ್ಷ ಕಟ್ಟಿದ್ರು. ಪಕ್ಷಕ್ಕೆ ಮೊನ್ನೆ ಮೊನ್ನೆ ಬಂದವರು ಅನಗತ್ಯವಾಗಿ ಗೊಂದಲ ಮಾಡ್ತಿದ್ದಾರೆ. ಸ್ವಯಂ ಘೋಷಿತ ಹಿಂದೂ ನಾಯಕ ಅಂತ ಹೇಳಿಕೊಳ್ತಿದ್ದಾರೆ. ಅವರು ಗೋಮುಖ ವ್ಯಾಘ್ರ. ಸ್ವಾಮೀಜಿಗಳು, ಸದಾನಂದಗೌಡ ಎಲ್ಲರ ವಿರುದ್ಧ ಅವರು ಮಾತಾಡ್ತಾರೆ. ಹೀಗೆ ಮಾತಾಡಿದ್ರೆ ಅವರ ವಿರುದ್ಧ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡ್ತೀವಿ. ನಾಳೆ ದಾವಣಗೆರೆಯ ಸಮಾವೇಶಕ್ಕೆ ದಿನಾಂಕ ಘೋಷಣೆ ಮಾಡ್ತೀವಿ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!