ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಕಾಂಗ್ರೆಸ್ ನಡುವೆ ಹೊಂದಾಣಿಕೆ ಇದೆ ಎಂಬ ಯತ್ನಾಳ್ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಯತ್ನಾಳ್ ನಾಲಿಗೆ ಮತ್ತು ತಲೆಗೆ ಕನೆಕ್ಷನ್ ತಪ್ಪಿದೆ. ನಾಲಿಗೆ ಹರಿಬಿಟ್ಟಿದಕ್ಕೆ ಬಿಜೆಪಿಯಲ್ಲಿ ಯತ್ನಾಳರನ್ನ ಉಚ್ಛಾಟನೆ ಮಾಡಿದ್ದಾರೆ. ನಮ್ಮ ಸಮಾಜದವರು ಅಂತಾ ನಾವು ನಮ್ಮ ಚೌಕಟ್ಟಿನಲ್ಲಿ ಅವರಿಗೆ ಗೌರವ ಕೊಡ್ತೀವಿ. ಆದರೆ, ಯತ್ನಾಳ್ ಮಾತನಾಡೋ ರೀತಿ ನೋಡಿದ್ರೆ ನಾಲಿಗೆಗೆ ತಲೆಗೆ ಕನೆಕ್ಷನ್ ತಪ್ಪಿದೆ ಅನಿಸುತ್ತೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೊಸ ಪಕ್ಷ ಕಟ್ಟುವ ವಿಚಾರದ ಬಗ್ಗೆ ಮಾತನಾಡಿದ ಸಚಿವೆ, ಯತ್ನಾಳರಿಗೆ ಒಳ್ಳೆಯದಾಗಲಿ ,ಭಗವಂತನ ಆಶೀರ್ವಾದ ಇರಲಿ. ಆದಷ್ಟು ಬೇಗ ಹೊಸ ಪಕ್ಷ ಕಟ್ಟಿ ರಾಜ್ಯದಲ್ಲಿ ಸಂಘಟನೆ ಮಾಡಲಿ ಎಂದರು.