ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆ, ಪರಿಷತ್ ವಿಪಕ್ಷ ನಾಯಕ ಆಯ್ಕೆ, ಪ್ರತಿಪಕ್ಷಗಳ ನಾಯಕ ಆಯ್ಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಮಾಜಿ ಸಿಎಂ ಯಡಿಯೂರಪ್ಪ ಸಭೆ ಅಂತ್ಯಗೊಂಡಿದೆ.
ಸಭೆಯಲ್ಲಿ ಕರ್ನಾಟಕ ವಿಪಕ್ಷ ನಾಯಕರ ಆಯ್ಕೆಗಾಗಿ ರಾಜ್ಯ ಬಿಜೆಪಿ ನಾಯಕರು ಹಾಗೂ ಹೈಕಮಾಂಡ್ ನಾಯಕರು ಕಸರತ್ತು ನಡೆ ಸಿದ್ದು,ಆದ್ರೆ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ.
ಹೀಗಾಗಿ ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ನಾಳೆ ಕೇಂದ್ರದಿಂದ ವೀಕ್ಷಕರಾದ ವಿನೋದ್ ತಾವ್ಡೆ, ಮನ್ಸುಖ್ ಮಾಂಡವೀಯ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ .
ಇವರು ರಾಜ್ಯ ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಬಳಿಕ ಹೈಕಮಾಂಡ್ ಗೆ ಮಾಹಿತಿ ನೀಡಲಿದ್ದು, ಬಳಿಕ ಯಾರು ವಿಪಕ್ಷ ನಾಯಕ ಎಂಬುವುದು ನಿರ್ಧಾರವಾಗಲಿದೆ.