ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಆರ್.ವಿ. ರಸ್ತೆ–ಬೊಮ್ಮಸಂದ್ರ ಹಳದಿ ಮಾರ್ಗ ಮೆಟ್ರೋ ರೈಲಿನಲ್ಲಿ ಪ್ರಯಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದು, ಬಳಿಕ ನೂತನ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.
ಬುಧವಾರದಿಂದ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಪ್ರಾರಂಭವಾಗಲಿದ್ದು, ಪ್ರಾರಂಭದಲ್ಲಿ 25 ನಿಮಿಷಕ್ಕೊಮ್ಮೆ ರೈಲು ಸಂಚಾರ ನಡೆಯಲಿದೆ. ಸದ್ಯಕ್ಕೆ ಕೇವಲ ಮೂರು ಮೆಟ್ರೋ ರೈಲುಗಳ ಮೂಲಕವೇ ಬಿಎಂಆರ್ಸಿಎಲ್ ಸೇವೆ ಆರಂಭಿಸಲು ನಿರ್ಧರಿಸಿದೆ. ಚಾಲಕರಿಲ್ಲದ (ಡ್ರೈವರ್‌ಲೆಸ್) ರೈಲುಗಳು ಇನ್ನೂ ಲಭ್ಯವಾಗದ ಕಾರಣ, ಹಳದಿ ಮಾರ್ಗದ ಸಂಪೂರ್ಣ ಸಾಮರ್ಥ್ಯದಲ್ಲಿ ಸಂಚಾರ ಪ್ರಾರಂಭಿಸಲು ಸಮಯ ಹಿಡಿಯಲಿದೆ.
ಆರ್.ವಿ. ರಸ್ತೆ–ಬೊಮ್ಮಸಂದ್ರ ಮಾರ್ಗದ ಒಟ್ಟು ಉದ್ದ 19.15 ಕಿಲೋಮೀಟರ್ ಆಗಿದ್ದು, 16 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗಕ್ಕೆ ಅಗತ್ಯವಿರುವ 15 ರೈಲುಗಳ ಪೈಕಿ ಪ್ರಸ್ತುತ ಮೂರು ರೈಲುಗಳು ಮಾತ್ರ ಲಭ್ಯ. ಪ್ರಾರಂಭದಲ್ಲಿ ದಿನಕ್ಕೆ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಹಳದಿ ಮೆಟ್ರೋ ದರ ಸ್ಟೇಜ್ ಲೆಕ್ಕದಲ್ಲಿ
ಆರ್ ವಿ ರಸ್ತೆಯಿಂದ ರಾಗಿಗುಡ್ಡದ ವರೆಗೆ 10 ರೂಪಾಯಿ.
ಆರ್ ವಿ ರಸ್ತೆ-ಜಯದೇವ 10 ರೂಪಾಯಿ.
ಆರ್ ವಿ ರಸ್ತೆ- BTM ಲೇಔಟ್ 20 ರೂ.
ಆರ್ ವಿ ರಸ್ತೆ -ಬೊಮ್ಮನಹಳ್ಳಿ 30 ರೂ.
ಆರ್ ವಿ ರಸ್ತೆ -ಕೂಡ್ಲೂಗೇಟ್ 40 ರೂ.
ಆರ್ ವಿ ರಸ್ತೆ -ಸಿಂಗಸಂದ್ರ 50 ರೂ.
ಆರ್ ವಿ ರಸ್ತೆ -ಎಲೆಕ್ಟ್ರಾನಿಕ್ ಸಿಟಿ 60 ರೂ.
ಆರ್ ವಿ ರಸ್ತೆ -ಬೊಮ್ಮಸಂದ್ರ 60 ರೂ.
ಸಿಲ್ಕ್ ಬೋರ್ಡ್- ಬೊಮ್ಮಸಂದ್ರ 60 ರೂ
ಹಳದಿ ಮಾರ್ಗದ ನಿಲ್ದಾಣಗಳು:
ಬೊಮ್ಮಸಂದ್ರ
ಹೆಬ್ಬಗೋಡಿ
ಹುಸ್ಕೂರ್ ರಸ್ತೆ
ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ
ಎಲೆಕ್ಟ್ರಾನಿಕ್ ಸಿಟಿ
ಬೆರಟೇನ ಅಗ್ರಹಾರ
ಹೊಸ ರೋಡ್
ಸಿಂಗಸಂದ್ರ
ಕೂಡ್ಲು ಗೇಟ್
ಹೊಂಗಸಂದ್ರ
ಬೊಮ್ಮನಹಳ್ಳಿ
ಸೆಂಟ್ರಲ್ ಸಿಲ್ಕ್ ಬೋರ್ಡ್
ಬಿಟಿಎಂ ಲೇಔಟ್
ಜಯದೇವ ಆಸ್ಪತ್ರೆ
ರಾಗಿ ಗುಡ್ಡ ದೇವಸ್ಥಾನ
ಆರ್.ವಿ. (ರಾಷ್ಟ್ರೀಯ ವಿದ್ಯಾಲಯ) ರಸ್ತೆ