WORLD YOGA DAY SPECIAL | ಯೋಗ ಎನ್ನುವುದು ಪುರಾತನ ಭಾರತದ ಜೀವನ ಶೈಲಿಯ ಅವಿಭಾಜ್ಯ ಅಂಗ

ಪ್ರತಿ ವರ್ಷ ವಿಶ್ವದಾದ್ಯಂತ ಜೂನ್ 21 ರಂದು ವಿಶ್ವ ಯೋಗ ದಿನ ಎಂದು ಆಚರಿಸಿ, ಭಾರತದ ಪುರಾತನ ಜೀವನಶೈಲಿಯ ಭಾಗವಾದ ಯೋಗವನ್ನು ಜಗತ್ತಿಗೆ ಪರಿಚಯಿಸಿ, ಯೋಗದಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಮಹೋನ್ನತ ಉದ್ದೇಶವನ್ನು ಹೊಂದಿದೆ.

14 Interesting Facts about Yoga to Know on the First International Day of Yoga - The Better Indiaವಿಶ್ವ ಯೋಗ ದಿನದ ಆಚರಣೆಯನ್ನು ಭಾರತದ ನೇತೃತ್ವದಲ್ಲಿ ಅಮೆರಿಕ ದೇಶ 2015ರಲ್ಲಿ ಆರಂಭಿಸಿತು. ಜೂನ್ 21ರಂದು ವಿಶೇಷವಾದ ದಿನವಾಗಿದ್ದು ಉತ್ತರ ಗೋಳಾರ್ದದ ಬೇಸಗೆಯ ಆಯನ ಸಂಕ್ರಾಂತಿಯ ಅತೀ ಹೆಚ್ಚು ಬೆಳಕು ಇರುವ ದಿನವಾಗಿದ್ದು ಸೂರ್ಯನು ಭೂಮಿಯ ಮಧ್ಯ ಭಾಗದಿಂದ ಅತೀ ಹೆಚ್ಚು ದೂರವಿರುವ ದಿನವಾಗಿರುತ್ತದೆ. ಈ ದಿನಕ್ಕೆ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ವಿಶೇಷವಾದ ಮಹತ್ವವಿದೆ.

5 Yoga asanas to help lower Uric acid ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2014, ಸೆಪ್ಟೆಂಬರ್ 27ರಂದು ನಡೆದ ಯುನೈಟೆಡ್ ನೇಷನ್ಸ್‍ನ ಜನರಲ್ ಅಸೆಂಬ್ಲಿಯಲ್ಲಿ ಈ ವಿಚಾರ ಪ್ರಸ್ತಾಪಿಸಿ, ಜೂನ್ 21ರಂದು ವಿಶ್ವ ಯೋಗ ದಿನ ಆಚರಿಸಬೇಕು ಎಂದು ಪ್ರಸ್ತಾಪನೆ ಇಟ್ಟರು. ಈ ಪ್ರಸ್ತಾಪನೆಯನ್ನು ಡಿಸೆಂಬರ್ 11, 2014ರಲ್ಲಿ ಅತೀ ಹೆಚ್ಚು ಕರತಾಡನದೊಂದಿಗೆ ಅಂಗೀಕರಿಸಿ, ವಿಶ್ವದ 177 ರಾಷ್ಟ್ರಗಳು ಈ ವಿಶ್ವಯೋಗ ದಿನಕ್ಕೆ ಅನುಮೋದನೆ ನೀಡಲಾಯಿತು.

TYPES OF YOGA: A DEFINITIVE GUIDE TO 4 POPULAR STYLESಯೋಗ ಎನ್ನುವುದು ಪುರಾತನ ಭಾರತದ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದ್ದು 5000 ವರ್ಷಗಳ ಇತಿಹಾಸ ಹೊಂದಿದೆ. ಮಾನಸಿಕ ದೈಹಿಕ ಮತ್ತು ಆಧ್ಯಾತ್ಮಿಕ ಆಯಾಮಗಳಿಂದ ಮನುಷ್ಯ ಪರಿಪೂರ್ಣ ಬೆಳವಣ ಗೆ ಪೂರಕವಾದ ವಾತಾವರಣ ಸೃಷ್ಟಿಸುವ ಯೋಗ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುತ್ತದೆ. ಯೋಗ ಎನ್ನುವ ಶಬ್ದ ‘ಯುಜ್’ ಎಂಬ ಸಂಸ್ಕøತ ಮೂಲ ದಿಂದ ಹುಟ್ಟಿದ್ದು, ಕೂಡಿಸು, ಜೋಡಿಸು, ಸೇರಿಸು ಎಂಬ ಮೂಲಾರ್ಥವನ್ನು ನೀಡುತ್ತದೆ. ದೇಹ ಬುದ್ಧಿ, ಮನಸ್ಸನ್ನು ಒಟ್ಟು ಗೂಡಿಸುವ ಪ್ರಕ್ರಿಯೆಯೇ ಯೋಗವಾಗಿರುತ್ತದೆ.

International Day Of Yoga 2024: 10 Benefits Of Practicing Yoga In Summerಮಹರ್ಷಿ ಪತಂಜಲಿಯವರಿಂದ ಪ್ರತಿಪಾದಿಸಲ್ಪಟ್ಟ ಅಷ್ಟಾಂಗ ಯೋಗದಲ್ಲಿ 8 ಕಂಬಗಳಿದ್ದು ಯಮ(ನಿರ್ಬಂಧಗಳು), ನಿಯಮ( ಆಚರಣೆಗಳು), ಆಸನ(ದೈಹಿಕ ಭಂಗಿಗಳು), ಪ್ರಾಣಾಯಾಮ(ಉಸಿರಾಟ ನಿಯಂತ್ರಣ), ಪ್ರತ್ಯಾಹಾರ(ಇಂದ್ರೀಯಗಳ ಹಿಂತೆಗೆದುಕೊಳ್ಳುವಿಕೆ), ಧಾರಣ (ಏಕಾಗ್ರತೆ), ಧ್ಯಾನ ಮತ್ತು ಸಮಾಧಿ ಎಂದು ಹೆಸರಿಸಲಾಗಿದೆ. ದೇಹ ಮತ್ತು ಮನಸ್ಸುಗಳ, ಆತ್ಮ ಮತ್ತು ಪರಾಮಾತ್ಮರ ಕೂಡುವಿಕೆಯೇ ಯೋಗ ಆಗಿರುತ್ತದೆ. ಯೋಗ ಎನ್ನುವುದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ಯೋಗಕ್ಕೆ ಯಾವುದೇ ಜಾತಿ, ಮತ, ಧರ್ಮ, ವರ್ಣಗಳ ಭೇದ ಭಾವವಿಲ್ಲ ಮತ್ತು ಹೆಣ್ಣು ಗಂಡು ಎನ್ನುವ ತಾರತಮ್ಯವಿಲ್ಲದೆ ಎಲ್ಲಾ ವಯಸ್ಸಿನ ಆಸಕ್ತಿ ಇರುವ ಯಾರೂ ಬೇಕಾದರೂ ಅಭ್ಯಸಿಸಬಹುದಾಗಿದೆ.

ಭಾರತದ ಸನಾತನ ಸಂಸೃತಿಯಲ್ಲಿ ಪತಾಂಜಲಿ ಮಹರ್ಷಿಯನ್ನು ಯೋಗದ ಪಿತಾಮಹ ಎಂದು ಕರೆಯಲಾಗುತ್ತದೆ. ಮತ್ತು ಪ್ರತಿ ಭಾರಿ ಯೋಗಭ್ಯಾಸ ಮಾಡವಾಗಲೂ ಪತಂಜಲಿ ಸೂತ್ರ ಪಠಿಸಿ, ಯೋಗಭ್ಯಾಸ ಮಾಡಲು ಆರಂಭಿಸಲಾಗುತ್ತದೆ. ಒಟ್ಟಿನಲ್ಲಿ ಈ ಭೂಮಿ ಮೇಲೆ ಹುಟ್ಟಿದ ಬಳಿಕ ಎದುರಾಗುವ ಎಲ್ಲಾ ಕಷ್ಟ, ನಷ್ಟ, ದುಗುಡ, ದುಮ್ಮಾನ, ನೋವು, ನಲಿವುಗಳಿಗೆ ಈ ಸೃಷ್ಟಿಯಲ್ಲಿ ಸಿಗುವ ಏಕೈಕ ಪರಿಹಾರ ‘ಯೋಗ’ ಎಂದು ಪುರಾತನ ಗ್ರಂಥಗಳಲ್ಲಿ ಸಾರಿ ಹೇಳಲಾಗಿದೆ.

Exploring the Benefits of Yoga and Meditation | Reservio Blogಯೋಗದ ಪ್ರಯೋಜನಗಳು:

ಯೋಗದಿಂದ ಪರಿಪೂರ್ಣ ಆರೋಗ್ಯ ಸಿದ್ದಿಯಾಗುತ್ತದೆ. ಆರೋಗ್ಯ ಎನ್ನುವುದು ಕೇವಲ ರೋಗದ ಅನುಪಸ್ಥಿತಿಯಲ್ಲ. ಅದು ಜೀವನದ ಕ್ರಿಯಾತ್ಮಕ ಅಭಿವ್ಯಕ್ತಿಯಾಗಿರುತ್ತದೆ. ಮತ್ತು ಜೀವನೋತ್ಸಾಹ ಹೆಚ್ಚಿಸುವ ಪ್ರಕ್ರಿಯೆಯಾಗಿರುತ್ತದೆ. ಯೋಗದಿಂದ ವ್ಯಕ್ತಿಯ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ವೃದ್ಧಿಯಾಗಿ, ಜೀವನೋತ್ಸಾಹ ಇಮ್ಮಡಿಯಾಗಿ ಬದುಕು ಹಸನಾಗುತ್ತದೆ.

ದಿನನಿತ್ಯ ಯೋಗ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮತ್ತು ಕೆಲಸದಲ್ಲಿ ಆಸಕ್ತಿ ಹೆಚ್ಚಿಸುತ್ತದೆ.

ದಿನನಿತ್ಯ ಯೋಗ ಮಾಡುವುದರಿಂದ ದೇಹದ ತೂಕ ನಿಯಂತ್ರಣಗೊಂಡು ಹಲವಾರು ಜೀವನಶೈಲಿಯ ರೋಗಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಮಾನಸಿಕ ಖಿನ್ನತೆ, ಹೃದಯಾಘಾತ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಯೋಗ ಮಾಡುವುದರಿಂದ ದೇಹದ ರೋಗ ನಿರೋಧಕ ಶಕ್ತಿ ವೃಧ್ಧಿಸುತ್ತದೆ. ಯೋಗ ಪ್ರಾಣಯಾಮ ಮತ್ತು ಧ್ಯಾನ ನಿರಂತರವಾಗಿ ಮಾಡುವುದರಿಂದ ದೇಹ ಮನಸ್ಸು ಮತ್ತು ಆತ್ಮಗಳ ನಡುವೆ ಹೊಂದಾಣಿಕೆ ಉಂಟಾಗಿ ಪರಿಪೂರ್ಣ ಆರೋಗ್ಯಕ್ಕೆ ಧನಾತ್ಮಕ ಮುನ್ನುಡಿ ಬರೆಯುತ್ತದೆ.

ಯೋಗದಿಂದ ಮಾನಸಿಕ ಶಾಂತಿ ನೆಮ್ಮದಿ ದೊರಕಿ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳು ವೃದ್ಧಿಸಿ ಆರೋಗ್ಯ ಪೂರ್ಣ ಕುಟುಂಬ ಮತ್ತು ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ.

ಯೋಗದಿಂದ ಅಂತಃಪ್ರಜ್ಞೆ ಸುಧಾರಿಸಿ ನಮ್ಮನ್ನು ನಾವು ಅರಿತುಕೊಳ್ಳಲು ಮತ್ತು ಯಾವ ಕೆಲಸವನ್ನು ಯಾವಾಗ ಹೇಗೆ, ಯಾಕೆ, ಮಾಡಬೇಕು ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ ಮತ್ತು ಸಮಾಜದ ಸತ್ಪ್ರಜೆಯನ್ನಾಗಿಸುತ್ತದೆ ಎಂದರೂ ತಪ್ಪಾಗಲಾರದು.

Traditional Hatha Yoga | Asia Society2025ರ ವಿಶ್ವ ಯೋಗ ದಿನ ಆಚರಣೆಯ ಧ್ಯೇಯ ವಾಕ್ಯ “Yoga for one earth one health” ( ಒಂದೇ ಭೂಮಿ ಒಂದೇ ಆರೋಗ್ಯಕ್ಕಾಗಿ ಯೋಗ)ಎಂಬುದಾಗಿದೆ. “ಯೋಗದಿಂದ ರೋಗ ದೂರ” ಎಂಬ ಹಿರಿಯರ ಮಾತಿನಂತೆ ಯಾವುದೇ ಜಾತಿ ಮತ, ಧರ್ಮ, ಲಿಂಗಗಳ ಬೇಧವಿಲ್ಲದೆ ನಾವೆಲ್ಲಾ ದಿನನಿತ್ಯ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಮಾಡುತ್ತಾ ನಮ್ಮ ಸನಾತನ ಸಂಸ್ಕøತಿಯ ಅವಿಭಾಜ್ಯ ಅಂಗವಾದ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಅಮರತ್ವವನ್ನು ಪಡೆಯೋಣ. ಅದರಲ್ಲಿಯೇ ನಮ್ಮ ಮತ್ತು ವಿಶ್ವದ ಶಾಂತಿ ಅಡಗಿದೆ.

  • ಡಾ. ಮುರಳಿ ಮೋಹನ್ ಚೂಂತಾರು
    ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!