ಬಳ್ಳಾರಿ ವಿಶ್ವ ಯೋಗ ದಿನಾಚರಣೆಗಿತ್ತು ಸಚಿವ ಶ್ರೀರಾಮುಲು ಸಾರಥ್ಯ

ಹೊಸದಿಗಂತ ವರದಿ ಬಳ್ಳಾರಿ:

ನಗರದ ಪ್ರಸಿದ್ಧ ಶ್ರೀ ಕೋಟೆ ಮಲ್ಲೇಶ್ವರ ದೇವಾಲಯದ ಆವರಣದಲ್ಲಿ ಅಂತರಾಷ್ಟ್ರೀಯ 8ನೇ ಯೋಗ ದಿನಾಚರಣೆಯನ್ನು ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು, ನಿತ್ಯ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಹೊಸ ಚೈತನ್ಯ ಮೂಡಲಿದೆ. ಯೋಗ ಸದೃಢ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದೆ. ಯೋಗಕ್ಕೆ ತನ್ನದೇ ಆದ ಶಕ್ತಿಯಿದೆ, ಯೋಗದ ಮಹತ್ವವನ್ನು ಇಡೀ ದೇಶವಷ್ಟೇ ಅಲ್ಲ, ವಿಶ್ವಕ್ಕೂ ತಿಳಿಸಿಕೊಟ್ಟ ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜೀ ಅವರು ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಮೈಸೂರಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಭಿನ್ನ ವಿಭಿನ್ನ ರೀತಿಯಲ್ಲಿ ಯೋಗಾಸನವನ್ನು ಮಾಡುವ ಮೂಲಕ ದೇಶದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇದು ಮೋದಿಜೀ ಅವರ ಅತ್ಯಂತ ದೊಡ್ಡ ಸಾಧನೆಯಾಗಿದೆ, ಯೋಗ ಸರ್ವ ರೋಗಕ್ಕೂ ರಾಮಬಾಣವಿದ್ದಂತೆ, ನಿಗಧತ ಅವಧಿಯಲ್ಲಿ ಯೋಗ ಮಾಡುವುದರಿಂದ ಆವರಿಸುವ ನಾನಾ ರೋಗಗಳು ದೂರವಾಗಲಿವೆ ಎಂದರು. ದೇಶಾದ್ಯಂತ ಜನರು ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಇದಕ್ಕೆ ಪ್ರೇರಣೆ ಪ್ರಧಾನಿ ಮೋದಿ ಮಾತ್ರ. ಕಳೆದ ಎಂಟು ವರ್ಷಗಳಿಂದ ಇಡೀ ದೇಶಕ್ಕೆ ಯೋಗದ ಮಹತ್ವವನ್ನು ಸಾರಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!