ಇವತ್ತು ‘ಫಿಟ್ ಆಗೋಣ’, ‘ಮೆಂಟಲ್ ಶಾಂತಿ ಬೇಕು’ ಅಂತ ಹೇಳ್ತಾ ಯೋಗವನ್ನು ಜೀವನಶೈಲಿಯ ಭಾಗವನ್ನಾಗಿಸಿಕೊಂಡವರು ಎಷ್ಟೋ ಜನ ಇದ್ದಾರೆ. ನೀವು ಕೂಡ ಈಗ ಯೋಗ ಶುರುಮಾಡೋಣ ಅಂತ ತೀರ್ಮಾನ ಮಾಡಿರಬಹುದು. ಆದರೆ ಮೊದಲ ದಿನ ಯೋಗ ಮ್ಯಾಟ್ ಮೇಲೆ ಕಾಲಿಡೋಕೆ ಮೊದಲು – “ನಾನು ಸರಿಯಾಗಿ ಮಾಡ್ತೀನಾ?” ಅನ್ನೋ ಪ್ರಶ್ನೆ ಮನಸ್ಸಿನಲ್ಲಿ ಇರುತ್ತೆ. ಯೋಗ ಮಾಡುವ ಮೊದಲೇ ಕೆಲವೊಂದು ಸಿಂಪಲ್ ಅಂಶಗಳನ್ನು ಗಮನದಲ್ಲಿಟ್ಟರೆ, ಪ್ರತಿ ದಿನವೂ ಯೋಗ ಸುಂದರ ಅನುಭವವಾಗುತ್ತೆ.
ಖಾಲಿ ಹೊಟ್ಟೆಯಲ್ಲಿ ಯೋಗಮಾಡಿ
ಯೋಗ ಮಾಡುವ right time ಅಂದ್ರೆ ಖಾಲಿ ಹೊಟ್ಟೆ. ಬೆಳಿಗ್ಗೆ ಎದ್ದು ಒಂದು ಲೋಟ ನೀರು ಕುಡಿದ ಮೇಲೆ ಅರ್ಧ ಗಂಟೆ ನಂತರ ಯೋಗ ಆರಂಭಿಸೋದು ಬೆಸ್ಟ್. ಬೆಳಗ್ಗೆ ಆಗ್ಲಿಲ್ಲ ಅಂದ್ರೆ, ಊಟ ಮಾಡಿದ ನಂತರ ಕನಿಷ್ಠ 2-3 ಗಂಟೆ ಗ್ಯಾಪ್ ಇಟ್ಟುಮಾತ್ರ ಮಾಡ್ಬೇಕು. ಊಟ ಮಾಡಿದ ತಕ್ಷಣ ಯೋಗ ಬೇಡ.
ಯೋಗ ಭಂಗಿಗಳನ್ನ ಸರಿಯಾಗಿ ಕಲಿಯೋಣ
ಪ್ರತಿ ಯೋಗ ಭಂಗಿಯೂ ಶರೀರಕ್ಕೆ ವಿಭಿನ್ನ ಲಾಭ ನೀಡುತ್ತೆ – ಆದರೆ ತಪ್ಪಾಗಿ ಮಾಡಿದ್ರೆ ದುಷ್ಟ ಪರಿಣಾಮ! ಆದ್ದರಿಂದ ಮೊದಲ ದಿನಗಳಲ್ಲಿ ತಜ್ಞರ ಮಾರ್ಗದರ್ಶನ ಅಥವಾ ಸರಿಯಾದ ವಿಡಿಯೋಗಳ ಸಹಾಯದಿಂದ ಸ್ಲೋ ಆಗಿ ಕಲಿಯಿರಿ. ನಿಮ್ಮ ದೇಹದ ಸ್ಥಿತಿಗೆ ತಕ್ಕ ಭಂಗಿಗಳನ್ನೇ ಆರಿಸಿ.
ಯೋಗಕ್ಕೆ ಸೂಕ್ತವಾದ ಬಟ್ಟೆ ಧರಿಸಿ
ಯೋಗಮಾಡೋವಾಗ ನೀವು ಧರಿಸುವ ಉಡುಗೆ ತುಂಬಾ ಮುಖ್ಯ. ಬಿಗಿಯಾದ ಬಟ್ಟೆ, ಸ್ವೆಟ್ ಆಗೋ ಫ್ಯಾಬ್ರಿಕ್ – ಇವೆಲ್ಲಾ ಯೋಗ ಅನುಭವವನ್ನು ಹಾಳು ಮಾಡಬಹುದು. ಬದಲಾಗಿ, ಹಗುರವಾದ, breathable fabric ಆಯ್ಕೆ ಮಾಡಿ. ವಿಶೇಷವಾಗಿ ಒಳಉಡುಗೆಗಳು ಆರಾಮದಾಯಕವಾಗಿರಲಿ.
ಯೋಗ ಮ್ಯಾಟ್ ಗಟ್ಟಿ ಇರಲಿ!
ಮ್ಯಾಟ್ ಆರಾಮದಾಯಕವಾಗಿರಬೇಕು, ಜಾರದೇ ಇರಬೇಕು. ನೀವೀಗ ಯೋಗ ಮಾಡುವಾಗ ಜಾರಿದ್ರೆ ಒಂದಿಷ್ಟು ನೋವು ಗ್ಯಾರಂಟಿ! ಜೊತೆಗೆ ಮ್ಯಾಟ್ ಸ್ವಚ್ಛವಾಗಿರಬೇಕು. ಒಂದೇ ಮ್ಯಾಟ್ ತಿಂಗಳವರೆಗೆ ತೊಳೆಯದೇ ಬಳಸಿದ್ರೆ – ಅದು ಆರೋಗ್ಯಕ್ಕಿಂತ ಸೋಂಕಿಗೆ ಆಹ್ವಾನವಾಗುತ್ತೆ.
ಶಾಂತ ಮತ್ತು ತಾಜಾ ಗಾಳಿಯ ಸ್ಥಳದಲ್ಲಿ ಅಭ್ಯಾಸ ಮಾಡಿ
ಯೋಗ ಮನಸ್ಸಿಗೂ, ದೇಹಕ್ಕೂ ಶಾಂತಿ ತರಬೇಕು. ಹಾಗಾಗಿ ತಾಜಾ ಗಾಳಿ ಬೀಸೋ ಸ್ಥಳದಲ್ಲಿ ಅಥವಾ ಮೃದುವಾದ ಬೆಳಕು ಇರುವ ಕೋಣೆಯಲ್ಲಿ ಅಭ್ಯಾಸ ಮಾಡುವ ಪ್ರಯತ್ನ ಮಾಡಿ.
ಯೋಗ ಒಂದು ಸಾಧನೆ. ಧೈರ್ಯ, ಶಿಸ್ತಿನ ಜೊತೆಗೆ ಸ್ವಲ್ಪ ಜ್ಞಾನವೂ ಬೇಕು. ಈ ಟಿಪ್ಸ್‌ಗಳನ್ನು ನೆನಪಿನಲ್ಲಿ ಇಟ್ಟು, ಪ್ರತಿ ದಿನವೂ ಪಾಸಿಟಿವ್ ಎನರ್ಜಿ ಇಟ್ಟು ಯೋಗ ಶುರು ಮಾಡಿ. ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಗ್ಯಾರಂಟಿ!