ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆ ಹಿನ್ನೆಲೆ ಕರಾವಳಿಯಲ್ಲಿ ಇಂದು ಭರ್ಜರಿ ರೋಡ್ ಶೋ ನಡೆಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡಿನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಪರವಾಗಿ ಮತಯಾಚನೆಗೈದರು.
ಬಂಟ್ವಾಳಕ್ಕೆ ಸಮೀಪದ ಬಸ್ತಿಪಡ್ಪುವಿನ ವಿಶಾಲ ಮೈದಾನದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿಬಂದಿಳಿದಯೋಗಿ ಅದಿತ್ಯನಾಥ್ ಅವರು ಕಾರಿನಲ್ಲಿ ರಸ್ತೆ ಮೂಲಕ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ತೆರಳಿ ಅಲ್ಲಿಂದ ತೆರೆದ ವಾಹನದಲ್ಲಿ ಬಸ್ ತಂಗುದಾಣದವರೆಗೆ ಸಾಗಿ ಬಂದರು.
ಯೋಗಿ ಅದಿತ್ಯನಾಥ್ ಅವರ ಅಗಮನದ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ರಾ.ಹೆ.ಬಿಜೆಪಿ ಹಾಗೂ ಕೇಸರಿ ಧ್ವಜದಿಂದ ಸಂಪೂರ್ಣ ಕೇಸರಿಮಯವಾಗಿತ್ತು.
ಸಂಘಟಕರ ನಿರೀಕ್ಷೆಯನ್ನು ಮೀರಿ ಜನಸಾಗರವೇ ಯೋಗಿಯನ್ನು ಕಾಣಲು ನೆರೆದಿತ್ತು.ಯೋಗಿ ಅದಿತ್ಯನಾಥ್ ಅವರ ಈ ರೋಡ್ ಶೋದಲ್ಲಿ ಪಕ್ಷದ ಮಾತ್ರವಲ್ಲ ಸಂಘಪರಿವಾರ ಸಂಘಟನೆಯ ಕಾರ್ಯಕರ್ತತರು ಭಾಗಿಯಾಗಿದ್ದರು.ಸಾರ್ವಜನಿಕರು,ಅಭಿಮಾನಿಗಳು ರಸ್ತೆಯ ಇಕ್ಕೆಲ,ಕಟ್ಟಡಗಳ ಮೇಲೆ ನಿಂತು ಯೋಗಿಯವರನ್ನು ಕಣ್ತುಂಬಿಕೊಂಡರು.
ರೋಡ್ ಶೋದಲ್ಲಿ ನೆರದ ಯುವ ಸಮೂಹ ಕೆಸರಿ ಶಾಲನ್ನು ತಿರುಗಿಸುತ್ತಾ ಯೋಗಿ…ಯೋಗಿ.. ಎಂದು ಜೈಕಾರ ಕುಣಿದು ಕುಪ್ಪಳಿಸಿದರು. ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.ಈ ಸಂದರ್ಭ ಮೋದಿ ಹಾಗೂ ಬಜರಂಗಬಲಿಗೂ ಜೈಕಾರ ಕೂಗಿದರು.
ಯೋಗಿ ಅದಿತ್ಯನಾಥ್ ಅವರು ರೋಡ್ ಶೋ ವೇಳೆ ಬಿ.ಸಿ.ರೋಡಿನ ಮೇಲ್ಸ್ ತುವೆಯ ಮೇಲಿಂದ ಕಾರ್ಯಕರ್ತರು ಹೂಮಳೆಗೈದರು.