ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ, ಸದ್ಯದಲ್ಲೇ ತಂಡಕ್ಕೆ ವಾಪಸ್ಸಾಗಲಿದ್ದಾರೆ.
ಇಂಜುರಿಯಿಂದಾಗಿ ಕಳೆದೊಂದು ವರ್ಷದಿಂದತಂಡದಿಂದ ಹೊರಗುಳಿದ ಜಸ್ಪ್ರೀತ್ ಬುಮ್ರಾ ಕಮ್ಬ್ಯಾಕ್ಗೆ ಮುಹೂರ್ತ ನಿಗದಿಯಾಗಿದೆ.
ಕಳೆದ ವರ್ಷ ಜೂನ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದ ಏಕದಿನ ಪಂದ್ಯವೇ ಲಾಸ್ಟ್ ಅದಾದ ನಂತರ ಬುಮ್ರಾ ಮತ್ತೆ ಬಾಲ್ ಮುಟ್ಟಿಲ್ಲ. ಏಷ್ಯಾಕಪ್, T20 ವಿಶ್ವಕಪ್ ಟೂರ್ನಿಗಳಲ್ಲಿ ಬುಮ್ರಾ ಅಲಭ್ಯತೆ ತಂಡಕ್ಕೆ ಕಾಡಿತ್ತು.
ಇದೀಗ ಇಂಜುರಿಯಿಂದ ಬುಮ್ರಾ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಐರ್ಲೆಂಡ್ ವಿರುದ್ಧದ T20 ಸರಣಿ ವೇಳೆ ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ. ಅಲ್ಲದೇ, ಕಮ್ಬ್ಯಾಕ್ ಸರಣಿಯಲ್ಲೇ ಬುಮ್ರಾಗೆ ನಾಯಕನ ಪಟ್ಟ ಕಟ್ಟಲು BCCI ಯೋಚಿಸ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಯುವಪಡೆಯನ್ನ ಮುನ್ನಡೆಸಲಿದ್ದಾರೆ. ಈ ಸರಣಿ ಮುಗಿದ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ T20 ಸರಣಿ ಆಡಲಿದೆ.
ಹಾರ್ದಿಕ್ ಪಾಂಡ್ಯಗೆ ಐರ್ಲೆಂಡ್ ಸರಣಿಯಿಂದ ರೆಸ್ಟ್ ನೀಡುವ ಸಾಧ್ಯತೆ ಇದೆ. ಇದರಿಂದ ಬುಮ್ರಾ ನಾಯಕತ್ವದಲ್ಲಿ IPLನಲ್ಲಿ ಮಿಂಚಿದ ಯುವ ಆಟಗಾರರಿಗೆ ಚಾನ್ಸ್ ನೀಡುವ ಪ್ಲಾನ್ BCCIನದ್ದಾಗಿದೆ. ಮತ್ತೊಂದೆಡೆ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ದೃಷ್ಟಿಯಿಂದ ಬುಮ್ರಾ ಫಿಟ್ನೆಸ್ ಟೀಂ ಇಂಡಿಯಾಗೆ ತುಂಬಾನೇ ಅಗತ್ಯವಾಗಿದೆ. ಇದಕ್ಕಾಗಿ ಐರ್ಲೆಂಡ್ ಸರಣಿಯಲ್ಲಿ ಬುಮ್ರಾರನ್ನ ಕಣಕ್ಕಿಳಿಸಲಾಗುತ್ತಿದೆ.