ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವೆಲ್ಲಾ ಮೊಟ್ಟೆ ತಿನ್ನುತ್ತೀರಿ, ನಾನಂತೂ ಮೊಟ್ಟೆ ತಿನ್ನಲ್ಲ, ಮುಟ್ಟೋದೂ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಮೊಟ್ಟೆ ನೀಡುವ ವಿಷಯ ಪ್ರಸ್ತಾಪವಾದಾಗ ತಮಾಷೆಯ ಪ್ರಸಂಗ ನಡೆದಿದೆ.
ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ಅಂಗನವಾಡಿ ಊಟ ಸರಿಯಿಲ್ಲ. ಕೆಟ್ಟ ಮೊಟ್ಟೆಗಳನ್ನು ನೀಡಲಾಗುತ್ತದೆ. ಬಾಳೆಹಣ್ಣು ಮತ್ತು ಕಡಲೆಕಾಯಿ, ಹಾಲು ಸಿಗುತ್ತಿಲ್ಲ. ಕೆಟ್ಟ ಆಹಾರ ನೀಡಲಾಗುತ್ತಿದೆ, ಅದಕ್ಕೆ ಸರ್ಕಾರ ಏನು ಮಾಡಿದೆ? ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಅಂಗನವಾಡಿಗಳಲ್ಲಿ ತಯಾರು ಮಾಡುವ ಆಹಾರ ಪದಾರ್ಥಗಳ ಪೊಟ್ಟಣ ತೋರಿಸಲು ಆರಂಭಿಸಿದರು. ಸಂಸತ್ತಿನ ಅಧ್ಯಕ್ಷರು ಸಂಸತ್ತಿನಲ್ಲಿ ಇವೆಲ್ಲವನ್ನೂ ತರಲು ಸಾಧ್ಯವಿಲ್ಲ ಎಂದು ಸೂಚಿಸಿದರು.